ಯಾರದೋ ನಿವೇಶನ ಅಣ್ಣಮ್ಮನ ಜಾತ್ರೆ
ದೊಡ್ಡಬಳ್ಳಾಪುರ :ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಭಾವತಿ ಎನ್ನುವವರು ಸರಸ್ವತಮ್ಮ ಎನ್ನುವವರಿಗೆ ಸರ್ಕಾರ ನಿರಾಶ್ರೀತರ ಯೋಜನೆಯಡಿ ಹಂಚಿಕೆ ಮಾಡಲಾಗಿದ್ದ ನಿವೇಶನವನ್ನು ಕಬಳಿಸಿ ಅಕ್ರಮ ವಾಗಿ ಮನೆ ನಿರ್ಮಾಣ ಮಾಡುತ್ತಿರುವ ಬಿಲ್ ಕಲೆಕ್ಟರ್ ಪ್ರಭಾವತಿ ಹಾಗೂ ಆಕೆಯ ಪತಿ ನಂಜಪ್ಪ ಎನ್ನುವವರು ಗೋಲ್ ಮಾಲ್ ಮಾಡಿ ನಮ್ಮ ನಿವೇಶನ ಕಬ್ಜ ಮಾಡಿದ್ದಾರೆ ಎಂದು ಸರಸ್ವತಮ್ಮ ಆರೋಪಿಸಿದ್ದಾರೆ ನಮಗೆ ಸೇರಿದ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣಮಾಡುತ್ತಿದ್ದಾರೆ. ಈ ಬಗ್ಗೆ ನಾನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ದೊಡ್ಡಬೆಳವಂಗಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ದೂರು ನೀಡಿದ್ದೇನೆ ಎಂದು ಆರೋಪಿಸಿದ್ದಾರೆ

ಹಿನ್ನೆಲೆ :ಹಿಂದೆ ಸರ್ಕಾರ ಹಂಚಿಕೆ ಮಾಡಿದ್ದ ನಿವೇಶನಕ್ಕೆ ಸಂಬಂದಿಸಿದಂತೆ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯಲ್ಲಿ ಸರಸ್ವತಮ್ಮ ಹೆಸರಲ್ಲಿ ಖಾತೆಯೂ ಇದ್ದು 2021 ರವರೆಗೆ ಕಂದಾಯವನ್ನು ಸಹಪಾವತಿ ಮಾಡಿದ್ದು ಬಿಲ್ ಕಲೆಕ್ಟರ್ ಪ್ರಭಾವತಿ ರವರೇ ಕಂದಾಯ ಕಟ್ಟಿಸಿಕೊಂಡಿದ್ದು ಸರಸ್ವತಮ್ಮ ರವರು ಪತಿಯ ಅನಾರೋಗ್ಯ ನಿಮಿತ್ತ ನೆಲಮಂಗಲ ದಲ್ಲಿ ವಾಸವಿದ್ದು ನಿವೇಶನ ನೋಡಲುಆಗಿಂದಾಗ್ಗೆ ಹೋಗುತ್ತಿ ರಲಿಲ್ಲ ಎನ್ನಲಾಗಿದ್ದು ಇವರ ವೀಕ್ನೆಸ್ಸ್ ತಿಳಿದಿದ್ದ ಬಿಲ್ ಕಲೆಕ್ಟರ್ ಪ್ರಭಾವತಿ ತಮ್ಮ ವಯಕ್ತಿಕ ಪ್ರಭಾವದಿಂದ ಅದೇ ಜಾಗಕ್ಕೆ ಅತೀಕ್ರಮ ಪ್ರವೇಶ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಸರಸ್ವತಮ್ಮರವರ ಜಾಗವನ್ನು ಕಬ್ಜ ಮಾಡಿ ಮನೆ ನಿರ್ಮಿಸಿ ಕೊಳ್ಳುತ್ತಿದ್ದಾರೆ ಎಂದುಸರಸ್ವತಮ್ಮ ನನಗೆ ನ್ಯಾಯ ಕೊಡಿಸುವಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ದೂರು ನೀಡಿದ್ದಾರೆ.
ಇನ್ನೂ ಈ ಬಗ್ಗೆ ಪರ ವಿರೋಧದ ಚೆರ್ಚೆಗಳು ಜೋರಾಗಿದ್ದು ಗ್ರಾಮ ಪಂಚಾಯತ್ ಸರ್ಕಾರಿ ನೌಕರರೇ ಈಗಾದರೆ ಬಡವರ ನಿವೇಶನಉಳಿಸಿ ಕೊಳ್ಳುವುದಾದರು ಹೇಗೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಗ್ರಾಮ ಪಂಚಾಯತ್ ನಲ್ಲಿ ಖಾತೆ ಇರುವ ನಿವೇಶನದಲ್ಲಿ ಅಲ್ಲಿನ ಬಿಲ್ ಕಲೆಕ್ಟರ್ ಯಾರದೋ ನಿವೇಶನ ಯಲ್ಲಮ್ಮನ ಜಾತ್ರೆ ಅನ್ನುವ ಹಾಗೇ ಅಕ್ರಮವಾಗಿ ಯಾರ ಭಯವು ಇಲ್ಲದೇ ಮನೆ ನಿರ್ಮಾಣ ಮಾಡಿ ಕೊಳ್ಳುತ್ತಿದ್ದರು ದೊಡ್ಡಬೆಳವಂಗಲ ಗ್ರಾಮ ಪಂಚಾಯತ್ ಅಧಿಕಾರಿಗಳು ಸುಮ್ಮನೆ ಮೌನಕ್ಕೆ ಶರಣಾಗಿರು ರುವುದೇಕೆ ಎನ್ನುವ ಪ್ರೆಶ್ನೆಯೂ ಸಹ ಇಲ್ಲಿ ಉದ್ಭವವಾಗುತ್ತದೆ .ಬಿಲ್ ಕಲೆಕ್ಟರ್ ಪ್ರಭಾವತಿ ಸಾಕ್ಷಿ ನಾಶ ಮಾಡುವ ಸಂಭವವಿರುವುದರಿಂದ ಕೂಡಲೇ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅಮಾನತ್ತು ಮಾಡುವಂತೆ ಸರಸ್ವತಮ್ಮ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ