November 8, 2025

300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ

ನೆಲಮಂಗಲ : ಕ್ಷೇತ್ರದ ರೈತರು, ಮಹಿಳೆಯರು ಹಾಗೂ ಜನರ ಬಯಕೆಯಂತೆ ಸಿಎಂ,ಡಿಸಿಎಂ ಶಂಕುಸ್ಥಾಪನೆ ಮಾಡಿದ್ದ 220 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್‌ರವರು ಭೂಮಿ ಪೂಜೆ ಮಾಡುತ್ತಿದ್ದಾರೆ ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಾತನಾಡಿದರು.

ನಗರದ ಅರಿಶಿನಕುಂಟೆಯ ಖಾಸಗಿ ಹೋಟಲ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

2024ರ ಮಾರ್ಚ್ 4ರಂದು ಸಿಎಂ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾ‌ರ್ ರವರು 274ಕೋಟಿ ವೆಚ್ಚದ 220ಕೆವಿ ವಿದ್ಯುತ್‌ ಉಪಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಿದ್ದರು.ಈಗ 26ಕೋಟಿ ಹೆಚ್ಚಿನ ಅನುದಾನ ಸೇರಿದಂತೆ 300ಕೋಟಿ ಅನುದಾನದ ವಿದ್ಯುತ್‌ ಉಪಕೇಂದ್ರದ ಭೂಮಿ ಪೂಜೆಯನ್ನು ಇಂಧನ ಸಚಿವ ಕೆ.ಜೆ ಜಾರ್ಜ್‌ರವರು ನೇರವೇರಿಸುತ್ತಿದ್ದಾರೆ. ಈ ಉಪಕೇಂದ್ರದಿಂದ ನೆಲಮಂಗಲ ತಾಲೂಕಿನ ರೈತರ ಕೊಳವೆ ಬಾವಿಗಳು, ಗ್ರಾಮೀಣ ಪ್ರದೇಶದ ಮನೆಗಳು, ಕೈಗಾರಿಕೆಗಳಿಗೆ ವಿದ್ಯುತ್‌ ವೋಲೇಜ್ ಸಮಸ್ಯೆ ದೂರವಾಗಲಿದ್ದು ಮುಂದಿನ 25ರಿಂದ 30 ವರ್ಷಗಳ ಕಾಲ ವಿದ್ಯುತ್‌ ವೋಲ್ವೇಜ್ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.

ಬಿ-ಖಾತೆ ಅಭಿಯಾನ, ಹಣ ನೀಡದಂತೆ ಸಲಹೆ: ಕಾಂಗ್ರೆಸ್ ನೇತೃತ್ವದ ಸರಕಾರ ಬಡವರು,ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು ಇ-ಖಾತೆಗಳಿಲ್ಲದ ನಿವೇಶನಗಳಿಗೆ ಬಿ-ಖಾತೆ ಅಭಿಯಾನ ಮಾಡಲಾಗುತ್ತಿದ್ದು ನಗರಸಭೆ ವ್ಯಾಪ್ತಿಯ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ. ಜನರಿಗಾಗಿ ನಾನೇ ಸ್ವತಃ ನಗರಸಭೆಯಲ್ಲಿ ಕುಳಿತು ಅಭಿಯಾನಕ್ಕೆ ಚಾಲನೆ ನೀಡಿ ಜನರಿಗೆ ಅನುಕೂಲ ಮಾಡಿಕೊಡುತ್ತೇನೆ. ಯಾರು ಸಹ ಮಧ್ಯವರ್ತಿಗಳು, ಅಧಿಕಾರಿಗಳಿಗೆ ಹಣ ನೀಡಬೇಡಿ, ಉಚಿತವಾಗಿ ಖಾತೆ ಮಾಡಿಸುವ ಕೆಲಸವನ್ನು ಮಾಡಲಾಗುತ್ತದೆ, ಹಣ ಕೇಳಿದರೆ ತಕ್ಷಣ ಮಾಹಿತಿ ನೀಡಿ ಎಂದು ಶಾಸಕರು ತಿಳಿಸಿದರು.

ಇಂದು ಭೂಮಿ ಪೂಜೆ : ನೆಲಮಂಗಲ ನಗರದ ಬಸವನಹಳ್ಳಿಯ ಉಪಕೇಂದ್ರದ ಭೂಮಿ ಪೂಜೆಯನ್ನು ಫೆ.19ರ ಬುಧವಾರ ಬೆಳಗ್ಗೆ 10ಗಂಟೆಗೆ ಇಂಧನ ಸಚಿವ ಕೆ.ಜೆ ಚಾರ್ಜ್ ಹಾಗೂ ಶಾಸಕ ಎನ್.ಶ್ರೀನಿವಾಸ್ ಭೂಮಿ ಪೂಜೆ ಮಾಡಲಿದ್ದು ಅನೇಕ ಮುಖಂಡರು,5ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.

ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ, ಎನ್‌ಪಿ ಎ ಅಧ್ಯಕ್ಷ ರಾದನಾರಾಯಣಗೌಡ, ನಗರಸಭೆ ಅಧ್ಯಕ್ಷರಾದ ಎನ್.ಗಣೇಶ್, ಉಪಾಧ್ಯಕ್ಷ ಆನಂದ್,ಮಾಜಿ ನಗರಸಭಾ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು,ಎನ್‌ಪಿಎ ಮಾಜಿ ಅಧ್ಯಕ್ಷ ಹೇಮಂತ್ ಕುಮಾ‌ರ್, ಸದಸ್ಯ ವಾಸು, ಬ್ಲಾಕ್ ಕಾಂಗ್ರೆಸ್ ಟಿ.ನಾಗರಾಜುಜಗದೀಶ್, ಮುಖಂಡರಾದ ಎಂ.ಕೆ ನಾಗರಾಜು, ಗೋವಿಂದರಾಜು, ನರಸಿಂಹಮೂರ್ತಿ, ಗಂಗಾದರ್ ಗಣಿ, ಪ್ರದೀಪ್, ಶೈಲೇಂದ್ರ. ಭಾಸ್ಕರ್, ನರಸಿಂಹಮೂರ್ತಿ, ಮುನಿಯಪ್ಪ, ವೆಂಕಟೇಶ್ ಮತ್ತಿತರರಿದ್ದರು.

error: Content is protected !!