November 8, 2025

ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ನೆಲಮಂಗಲ : ಕನ್ನಡ ಸಾಹಿತ್ಯ ಪರಿಷತ್‌ ನಿಂದ ತಾಲೂಕಿನ 13ನೇ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್.5ರಂದು ಯಂಟಗಾ ನಹಳ್ಳಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದು ಫೆ.19ರ ಬುಧವಾರ ಮಧ್ಯಾಹ್ನ 3ಗಂಟೆಗೆ ತಾಲೂಕು ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನೆಡೆಯಲಿದೆ ಎಂದುಕನ್ನಡಸಾಹಿತ್ಯಪರಿಷತ್ತು ತಾಲೂಕು ಅಧ್ಯಕ್ಷರಾದ ಬಿ.ಪ್ರಕಾಶ್‌ಮೂರ್ತಿತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

 

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಕಾರ್ಯಕಾರಿ ಸಮಿತಿ ತೀರ್ಮಾನ ಮಾಡಿದ್ದು ಇಲ್ಲಿಯವರೆಗೂ ಸಮ್ಮೇಳನ ನಡೆಸದ ಹಾಗೂ ಕನ್ನಡ ಸಾಹಿತ್ಯದ ಕೆಲಸವಾಗದ ಯಂಟಗಾನಹಳ್ಳಿ, ಸೋಲದೇವನಹಳ್ಳಿ, ಶ್ರೀನಿವಾಸಪುರ ಭಾಗದಲ್ಲಿ ಸಾಹಿತ್ಯದ ತೇರು ಸಾಗಬೇಕು ಎನ್ನುವ ದೃಷ್ಟಿಯಿಂದ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಸಮ್ಮೇಳನ ಮಾಡಲಾಗುತ್ತಿದೆ. ಸಮ್ಮೇಳನದ ಬಗ್ಗೆ ಸಲಹೆ ಸೂಚನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಕಸಾಪ ಮಾಜಿ ಅಧ್ಯಕ್ಷರು, ಕನ್ನಡಪರ ಸಂಘಟನೆಗಳು ಪ್ರಮುಖರು, ರೈತ, ದಲಿತ,ವಿವಿಧ ಸಮುದಾಯಗಳ ಸಂಘಟನೆಗಳ ಪ್ರಮುಖರು ಪೂರ್ವಭಾವಿ ಸಭೆಗೆ ಆಗಮಿಸಿ ಸಲಹೆ ನೀಡಿ ಎಂದು ಮನವಿ ಮಾಡಿದರು.

ನೂತನ ಪದಾಧಿಕಾರಿಗಳ ಘೋಷಣೆ : ಕನ್ನಡ ಸಾಹಿತ್ಯ ಪರಿಷತ್‌ ನೂತನ ಕಸಬಾ ಅಧ್ಯಕ್ಷರಾಗಿ ಕಾಚನಹಳ್ಳಿಯ ಕೆ.ಸಿ ರಮೇಶ್, ಮಹಿಳಾ ಪ್ರತಿನಿಧಿಗಳಾಗಿ ಕಲಾವತಿ,

ಸುನಂಧಮ್ಮ, ಸುಮಿತ್ರಾದೇವಿ, ಸುಜಾತರವರನ್ನು ಆಯ್ಕೆ ಮಾಡಿ ಘೋಷಣೆ ಮಾಡಿದರು.

ಈಸಂದರ್ಭದಲ್ಲಿ ಹಿಂದಿನ ಸಮ್ಮೇಳನಾಧ್ಯಕ್ಷ ಚೌಡಯ್ಯ, ಗೌರವಕಾರ್ಯದರ್ಶಿಗಳಾದ ವೀರಸಾಗರ ಭಾನುಪ್ರಕಾಶ್, ಸದಾನಂದ ಆರಾಧ್ಯ, ನಗರ ಅಧ್ಯಕ್ಷ ರಾದಮಲ್ಲೇಶ್, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್, ಸಂಘಸಂಸ್ಥೆ ಪ್ರತಿನಿಧಿ ಹೊಸಪಾಳ್ಯ ವಿಜಯ್, ಬಾಲಕೃಷ್ಣ, ಕವಿ ನೂರುದ್ದೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!