November 8, 2025

ಉದ್ಯಮಿ ಒಕ್ಕಲಿಗ ಎಕ್ಸ್ ಪೋಗೆ ಭಾಗವಹಿಸೋಣ ಬನ್ನಿ

ನೆಲಮಂಗಲ : ಅರಮನೆ ಮೈದಾನದಲ್ಲಿ ಜನವರಿ 3,4,5ನೇ ತಾರೀಕ್ ನಡೆಯುತ್ತಿರುವ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ ಪೋ ಭಾಗವಹಿಸಲು ನೆಲಮಂಗಲ ನಗರದ ತಾಲೂಕು ಕಚೇರಿ ಎದುರಿನ ಕೆಂಗಲ್ ಹನುಮಂತಯ್ಯ ಸರ್ಕಲ್ ನಲ್ಲಿ ಸದಸ್ಯತ್ವ ನೊಂದಣಿಯನ್ನು ಆಯೋಜಿಸಲಾಗಿದ್ದು ತಪ್ಪದೇ ನೆಲಮಂಗಲ ತಾಲೂಕಿನ ಎಲ್ಲಾ ಒಕ್ಕಲಿಗರು ಸದಸ್ಯತ್ವ ಪಡೆದು ಭಾಗವಹಿಸಲು ಮನವಿ ಮಾಡಲಾಗಿದೆ.

ಉದ್ಯಮಿ ಒಕ್ಕಲಿಗ ಎಕ್ಸ್ ಪೋ ನಲ್ಲಿ ರಾಜ್ಯದ 11 ಕ್ಷೇತ್ರಗಳ ಒಕ್ಕಲಿಗ ಉದ್ಯಮಿಗಳು ಭಾಗವಹಿಸಲಿದ್ದು ನೆಲಮಂಗಲ ಒಕ್ಕಲಿಗ ಉದ್ಯಮಿಗಳು, ಉದ್ಯೋಗ ಆಸಕ್ತರು, ಉದ್ಯೋಗಿಗಳು ಭಾಗವಹಿಸಿ ಬಹಳಷ್ಟು ಅನುಕೂಲ ಪಡೆದುಕೊಳ್ಳಲು ಉದ್ಯಮಿ ರವಿಕುಮಾರ್ ಮನವಿ ಮಾಡಿದ್ದಾರೆ.

ನೆಲಮಂಗಲ ನಗರದ ತಾಲೂಕು ಕಚೇರಿ ಎದುರಿನ ಕೆಂಗಲ್ ಹನುಮಂತಯ್ಯ ಸರ್ಕಲ್ ನಲ್ಲಿನ ಸದಸ್ಯತ್ವ ಅಭಿಯಾನದ ಸ್ಟಾಲ್ ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್ ಮೂರ್ತಿ , ವಿಜಯ್ ಹೊಸಪಾಳ್ಯ, ಪ್ರೇಸ್ ಕ್ಲಬ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಭಾನುಪ್ರಕಾಶ್, ಗುರುಪ್ರಸಾದ್ , ನಗರಸಭೆ ಸದಸ್ಯ ಅಂಜನಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೂದಿಹಾಳ್ ಕಿಟ್ಟಿ, ಗ್ರಾಮಪಂಚಾಯಿತಿ ಸದಸ್ಯ ಸಂದೀಪ್, ಯುವಮುಖಂಡ ಲಕ್ಷ್ಮೀನಾರಾಯಣ್, ಮಧು, ಪವನ್ ಹೊಸಪಾಳ್ಯ,ಮಂಡಿಗೆರೆ ವಾಸು ಸೇರಿದಂತೆ ಅನೇಕರು ಚಾಲನೆ ನೀಡಿದರು.

error: Content is protected !!