ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್ ನಲ್ಲೊಬ್ಬ ಖತರ್ನಾಕ್ ಉಪಾಧ್ಯಕ್ಷ ಹಾಗೂ ಸದಸ್ಯನೊಬ್ಬನ ಅಸಲಿ ಮುಖವಾಡ ಇಂದು ಬಹಿರಂಗವಾಗಿದೆ.

ಹಲವು ಮಾಧ್ಯಮಗಳಲ್ಲಿ ಸುಳ್ಳಗಳಿಂದಲೇ ಕೋಟೆ ಕಟ್ಟುತ್ತಿರುವ ಉಪಾಧ್ಯಕ್ಷ ಗಿರೀಶ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದು ಈತ ದಲಿತ ಸಮುದಾಯವನ್ನೇ ತನ್ನ ರಾಜಕೀಯ ಪ್ರಭಾವವನ್ನು ಬಳಸಿ ತುಳಿಯಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದ್ದು ಈತನ ವಿರುದ್ಧ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಗಂಗಮ್ಮ ಎಂಬ ಬಡ ಮಹಿಳೆ ಈತನ ಹೀನ ಚರಿತ್ರೆಯ ಬಗ್ಗೆ ದೂರು ನೀಡಿದ್ದಾರೆ.ತನಿಖೆ ನಡೆಸಿರುವ ಇಲಾಖೆ ಈತನ ವಿರುದ್ಧ ಎಫ್. ಐ. ಆರ್ ದಾಖಲಿಸಲು ಸೂಚನೆ ನೀಡಿದ್ದು. ಕಳಲು ಘಟ್ಟ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷರು ಕೂಡ ಈತನ ವಿರುದ್ಧ ಎಡಿಟಿಂಗ್ ವಿಡಿಯೋ ಬಳಸಿ ದಲಿತ ಸಮುದಾಯದ ಅಧ್ಯಕ್ಷರನ್ನು ರಜೆ ಹಾಕಿಸಲು ಸಂಚು ರೂಪಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಈತನಿಗೆ ಸಹಕಾರ ನೀಡದಿದ್ದರೆ ಅಕ್ರಮ ಎನ್ನುವ ಬಣ್ಣ ಕಟ್ಟಿ ಮಾನಹಾನಿ ಮಾಡಿ ಹೆದರಿಕೆ ಹಾಕುವ ಕಾಯಕದಲ್ಲಿ ಉಪಾಧ್ಯಕ್ಷ ಗಿರೀಶ್ ತೊಡಗಿದ್ದಾನೆ. ಅಧ್ಯಕ್ಷರ ಗಂಡನ ತಮ್ಮನ ಬಳಿ ಈ ಉಪಾಧ್ಯಕ್ಷ 4 ಲಕ್ಷ ಹಣ ಬೇರೆ ಪಡೆದು ವಂಚನೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು ಹಣ ವಾಪಾಸ್ ಕೇಳಿದ್ರೆ ಭ್ರಷ್ಟಾಚಾರ ಮಾಡಿದ್ದೀರಾ ಎಂದು ಹೆದರಿಕೆ ಬೇರೆ ಹಾಕುತಿದ್ದಾನೆ. ಇನ್ನೂ ಇಲ್ಲಿನ ಮಾಜಿ ಅಧ್ಯಕ್ಷ ಲೋಕೇಶ ಕೂಡ ಆತನ ಅವಧಿಯಲ್ಲಿ ಸಾಕೋಷ್ಟು ಭ್ರಷ್ಟಾಚಾರ ಮಾಡಿ ತನ್ನ ಮಗನ ಹೆಸರಿನಲ್ಲಿ ಗ್ರಾಮ ಪಂಚಾಯತ್ ಹಣಕ್ಕೆ ಕನ್ನ ಹಾಕಿದ್ದಾನೆ ಈ ಪಿಡಿಓ ರವರು ಈತನ ಚರಿತ್ರೆ ಬಗ್ಗೆ ವರದಿ ನೀಡದಂತೆ ತಡೆಯಲು ಪಿಡಿಓರವರನ್ನು ಹೆದರಿಕೆ ಹಾಕಲು ಸುಳ್ಳು ಆರೋಪ ಮಾಡಲು ನಿಂತಿದ್ದಾನೆ.ಗ್ರಾಮ ಪಂಚಾಯತ್ ಪ್ರೊಸಿಡಿಂಗ್ ಪುಸ್ತಕ ಕಳವು ಆರೋಪಿಗೆ ಬೆಂಬಲವಾಗಿ ನಿಂತಿರುವ ಇವರು ಪ್ರಕರಣದ ದಿಕ್ಕು ತಪ್ಪಿಸಲು ನಿಂತಿದ್ದು. ಉಪಾಧ್ಯಕ್ಷ ಗಿರೀಶ್ ಗೆ ಅಧ್ಯಕ್ಷ ಹುದ್ದೆ ಬಿಟ್ಟು ಕೊಟ್ಟಿದ್ರೆ ಭ್ರಷ್ಟಾಚಾರದ ಆರೋಪವೇ ಬರುತ್ತೀರಲಿಲ್ಲ. ಅದ್ರಲ್ಲೂ ಗ್ರಾಮ ಪಂಚಾಯತಿಯ ಜನ ಸ್ನೇಹಿ ಆಡಳಿತಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ ಗಾಂಧಿ ಗ್ರಾಮ ಪುರಸ್ಕಾರವೇ ಇವರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.ಸದ್ಯ ಇವರ ಆರೋಪಕ್ಕೆ ತಿರುಗೇಟು ಕೊಡಲು ಗ್ರಾಮ ಪಂಚಾಯತಿ 10 ಜನ ಸದಸ್ಯರು ಮುಂದಾಗಿದ್ದು ಉಪಾಧ್ಯಕ್ಷ ಹಾಗೂ ಸುಳ್ಳು ಆರೋಪ ಮಾಡುತ್ತಿರುವ ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಪಂಚಾಯತ್ ರಾಜ್ ಇಲಾಖೆ ಇಓ ಮತ್ತು ಸಿಇಓಗೆ ದೂರು ನೀಡಿದ್ದಾರೆ.ಇನ್ನಾದ್ರೂ ಇಂತಹ ವಾಮ ಮಾರ್ಗ ಬಿಟ್ಟು ಉಪಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ಲೋಕೇಶ್ ಗ್ರಾಮ ಪಂಚಾಯತ್ ಅಭಿವೃದ್ಧಿ ಕಡೆ ಇವರು ಗಮನ ಹರಿಸುತ್ತಾರಾ ಕಾದು ನೋಡಬೇಕಿದೆ.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ