November 8, 2025

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತ | ತೊಗರಿಗೆ ಕಂದು ಬಣ್ಣ ಚುಕ್ಕೆ. ಮಂಜಿನ ಕಾಟಕ್ಕೆ ಕಮರಿದ ತೊಗರಿ

 

ಇಂಡಿ.ಬರದ ಸಮಸ್ಯೆ ಜೊತೆಗೆ ಮಂಜಿನ ಪ್ರಭಾವದಿಂದಾಗಿ ತಾಲೂಕಿನಲ್ಲಿ ತೊಗರಿ ಬೆಳೆ ಅಕ್ಷರಸ ಕಮರಿದೆ. ವಾಣಿಜ್ಯ ಬೆಳೆ ತೊಗರಿಗೆ ಈಗ ಮಂಜಿನ ಕಾಟ ಶುರುವಾಗಿದೆ. ದಟ್ಟ ಮಂಜು ಕವಿಯುತ್ತಿದ್ದರಿಂದ ತೊಗರಿ ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ.ತೊಗರಿ ಮೊಗ್ಗುವಿನಿಂದ ಕೂಡಿದೆ.ಆದರೆ ಬೆಳಗ್ಗೆ ಮಂಜಿನ ವಾತಾವರಣದಿಂದ ಹೂ ಉದುರುವಿಕೆ, ಎಲೆ ಹಾಗೂ ಗಿಡದ ಮೇಲೆ ಕಂದು ಚುಕ್ಕೆ ಕಾಣಿಸಿಕೊಳ್ಳುತ್ತಿದ್ದರಿಂದ ಇಳುವರಿ ಕುಸಿಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ತಾಲೂಕಿನಲ್ಲಿ ರೈತರು ಬೆಳೆಯುತ್ತಿದ್ದ ತೊಗರಿಗೆ ಪ್ರತಿ ವರ್ಷ ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ದೊರೆಯುವದರಿಂದ ರೈತರು ಹೆಚ್ಚು ತೊಗರಿ ಬೆಳೆಯುತ್ತಿದ್ದಾರೆ. ತಾಲೂಕಿನ ಒಟ್ಟು ಒಂದು ಲಕ್ಷ ೨೦ ಸಾವಿರ ಹೇಕ್ಟರ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಆದರೆ ತೊಗರಿಗೆ ಹವಾಮಾನ ವೈಪರೀತ ಪೆಟ್ಟು ಕೊಡುತ್ತಿದೆ. ರಾತ್ರಿಯಿಂದಲೇ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗುತ್ತಿದೆ.ನಸುಕಿನ ಜಾವ ಅಧಿಕವಾಗುವ ಮಂಜು ಬೆಳಗ್ಗೆ ೮ರ ವರೆಗೂ ಇರುತ್ತದೆ. ಇದರಿಂದ ಉಳಿದ ಬೆಳೆಗೂ ಮಂಜು ಕಂಟಕವಾಗಲಿದೆ ಎನ್ನುತ್ತಾರೆ ರೈತರು.

ಮಂಜಿನಿಂದ ತೊಗರಿ ಮೊಗ್ಗಿನ ಕೊನೆಯ ಭಾಗ ಸುಟ್ಟಂತೆ ಆಗಲಿದೆ. ಇದರಿಂದ ಹಾನಿಯಾಗುವ ಸಾದ್ಯತೆ ಇದೆ.

ಪ್ರಸಕ್ತ ಸನ್ನಿವೇಶದಲ್ಲಿ ಮುಂಜಾನೆ ಇಬ್ಬನಿಯಿಂದ ತೊಗರಿ ಬೆಳೆಯಲ್ಲಿ ಎಲೆ ಚಿಕ್ಕೆರೋಗ ಹೆಚ್ಚಾಗುವ ಸಾದ್ಯತೆ ಇದ್ದು ರೋಗದ ಲಕ್ಷಣಗಳು ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡು ಬರುತ್ತವೆ. ಈ ಚುಕ್ಕೆಗಳು ಸಂಖ್ಯೆ ಮತ್ತು ಗಾತ್ರದಲ್ಲಿ ಬೆಳೆದು ಒಂದನ್ನೊಂದು ಕೂಡಿಕೊಂಡು ಎಲೆಯ ಬಹುಭಾಗವನ್ನು ಆವರಿಸುವುದು.ರೋಗ ತೀರ್ವ ವಾದಂತೆ ಎಲೆಗಳೆಲ್ಲಾ ಉದುರಿಹೋಗಿ ಗಿಡ ಬೇಳಾಗಿ ಕಾಣುತ್ತದೆ.

ಡಾ. ಪ್ರಕಾಶ ಕೃಷಿ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಇಂಡಿ

ಕಾರ್ಬನ ಡೈಜಿಮ್ ೫೦ ಡಬ್ಲೂಪಿ ಒಂದು ಗ್ರಾಂ ಅಥವಾ ಹೆಕ್ಸಾಕೊನೊಝೇಲ್ ೫ ಇಸಿ ಒಂದು ಎಂ ಎಲ್, ಜೊತೆಗೆ ೦.೫ ಎಂಎಲ್ ಡಬ್ಲೂ ಎಎ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಿರಿ.ತೊಗರಿಯಲ್ಲಿ ಎಲೆ ಮೂದುಡುವಿಕೆ ಜೊಂಡೆ ಗಟ್ಟುವದು ನಿರ್ವಹಣೆಗೆ ಪ್ರೋಫೆನೊಪಾಸ ೨ ಎಂಎಲ ಮತ್ತು ಕಾರಟಾಪ ಹೈಡ್ರೋಕ್ಲೋರೈಡ್ ಒಂದು ಗ್ರಾಂ ಜೊತೆಗೆ ಲಘು ಪೋಷಕಾಂಶಗಳ ಮಿಶ್ರಣ ಫಲ್ಸ ಬೂಸ್ಟರನ್ನು ೧೦ ಗ್ರಾಂ ಪ್ರತಿ ಲೀಟರಗೆ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಡಾ. ಹೀನಾ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಇಂಡ

ತೊಗರಿಗೆ ಮಂಜಿನ ಕಾಟ ಪ್ರಾರಂಭವಾಗಿದ್ದು ರೈತರು ಕೃಷಿ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆಯಬೇಕು. ಇಲಾಖೆಯವರು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

ಚಂದ್ರಕಾಂತ ಪವಾರ ಉಪ ನಿರ್ದೇಶಕರು ಕೃಷಿ ಇಲಾಖೆ ಇಂಡಿ

ತಾಲೂಕಿನಲ್ಲಿ ತೊಗರಿ ಬೆಳೆಗೆ ಮಂಜಿನ ಕಾಟ ಶುರುವಾಗಿದೆ. ಹೀಗಾಗಿ ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳ ತಂಡವು ತೊಗರಿಹೊಲಕ್ಕೆ ತೆರಳಿ ಪರಿಶೀಲನೆ ನಡೆಸಿ ರೈತರಿಗೆ ಮಾಹಿತಿ ನೀಡುವ ಕಾರ್ಯ ಕೈಗೊಳ್ಳಲಾಗಿದೆ.

ಮಹಾದೇವಪ್ಪ ಏವೂರ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಇಂಡಿ

ಇಂಡಿ ತಾಲೂಕಿನ ಸಾತಪೂರ ಗ್ರಾಮದ ಕಾಳಪ್ಪ ರೂಗಿಯವರ ತೋಟಕ್ಕೆ ಭೇಟಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ಡಾ. ಹೀನಾ ಮತ್ತು ಡಾ. ಪ್ರಕಾಶ

error: Content is protected !!