November 8, 2025

ಆಪರೇಷನ್ ಕಮಲ ನಡೆಯುತ್ತಿರುವುದು ಸತ್ಯ ,ಈ ಪ್ರಯತ್ನದಲ್ಲಿ ಬಿಜೆಪಿ ಜೆಡಿಎಸ್ ಯಶಸ್ಸು ಸಾಧಿಸಲಾರರು,, ಶಾಸಕ ಎನ್. ಶ್ರೀನಿವಾಸ್ ಹೇಳಿಕೆ

ನೆಲಮಂಗಲ : ಆಪರೇಷನ್ ಕಮಲ ಚರ್ಚೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು.ಕೈ ಶಾಸಕರಿಗೆ 100 ಕೋಟಿ ಆಫರ್ ಮಾಡಲಾಗಿದೆ ಎಂದು ಶಾಸಕ ರವಿ ಗಣಿಗ ಆರೋಪ ಮಾಡಿದ್ದರು. ಇದರ ಮಧ್ಯೆ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಸಹ ಧ್ವನಿಗೂಡಿಸಿದ್ದು, ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ಪ್ರಯತ್ನಿಸುತ್ತಿದೆ, 50 ಶಾಸಕರನ್ನು ಸಂಪರ್ಕಿಸಿರುವುದು ಸತ್ಯ ಆದರೆ ಅವರ ಪ್ರಯತ್ನ ಫಲ ನೀಡುವುದಿಲ್ಲ ಎಂದು ಶಾಸಕ ಎನ್ ಶ್ರೀನಿವಾಸ್ ಹೇಳಿಕೆ ನೀಡಿದರು.

 

ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕರು ಸರ್ಕಾರ ಬಂದಾಗಿನಿಂದಲೂ ನಮ್ಮ ಶಾಸಕರುಗಳನ್ನು ಬಿಜೆಪಿ ನಾಯಕರುಗಳು ಸಂಪರ್ಕಿಸುತ್ತಿದ್ದಾರೆ, ಹಲವು ಆಮಿಷಗಳನ್ನು ಸಹ ಒಡ್ಡುತ್ತಿದ್ದಾರೆ, ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಜನಪರ ಕೆಲಸಗಳನ್ನು ಮಾಡುತ್ತಿರುವುದು ಸಹಿಸಿಕೊಳ್ಳಲು ಆಗುತ್ತಿಲ್ಲ. 4 ತಿಂಗಳ ಹಿಂದೆ ಸುಮಾರು 50 ಶಾಸಕರುಗಳನ್ನು ಸಂಪರ್ಕಿಸಿ ಹಲವು ಆಮಿಷಗಳನ್ನು ಒಡ್ಡಿದ್ದರೂ.ನಮ್ಮ ಶಾಸಕರು ಅವರ ಆಮಿಷಗಳಿಗೆ ಒಳಗಾಗಲಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮೂಡ ಹಗರಣವನ್ನು ಹೊರತಂದರು, ಅದು ವಿಫಲವಾಯಿತು. ಈಗ ಮತ್ತೆ ಸರ್ಕಾರವನ್ನು ಅಸ್ಥಿರಗೊಳಿಸಲು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ, ನಮ್ಮ ಸರ್ಕಾರದ 136 ಶಾಸಕರು ಅವರ ಆಮಿಷಗಳಿಗೆ ಬಲಿಯಾಗುವುದಿಲ್ಲ, ಸುಭದ್ರ ಸರ್ಕಾರ ನೀಡಲು ನಾವೆಲ್ಲರೂ ಬದ್ಧರಾಗಿದ್ದೇವೆ,

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಮುಖ್ಯಮಂತ್ರಿಗಳು ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ ಎಂದರು,

ಆಮಿಷ ಒಡ್ಡಿದ್ದು ನಿಜ : ನಮ್ಮ ಶಾಸಕರುಗಳಿಗೆ ಮಂತ್ರಿ ಪದವಿ. ಹಣದ ಪ್ರಭಾವವನ್ನು ಬೀರುತ್ತಿರುವುದು ನಿಜ ಬಿಜೆಪಿ ಜೆಡಿಎಸ್ ನ ಆಮೀಷಗಳಿಗೆ ನಮ್ಮ ಶಾಸಕರುಗಳು ಬಲಿಯಾಗಿಲ್ಲ, ಬಿಜೆಪಿ ಹಾಗೂ ಜೆಡಿಎಸ್ ನ ನಾಯಕರುಗಳಿಗೆ ಇದು ಶೋಭೆ ತರುವುದಿಲ್ಲ, ನನಗೂ ಸಹ ಕೆಲವು ತಿಂಗಳಗಳ ಹಿಂದೆ ಕೆಲವು ಆಮೀಷಗಳನ್ನು ಒಡ್ಡಿದ್ದರೂ, ನಾನು ಅವರ ಆಮೀಷಗಳಿಗೆ ಬಲಿಯಾಗಲಿಲ್ಲಾ,ಆದರೆ ಅವರೇ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.

error: Content is protected !!