November 8, 2025

ಗೋಮಾಳದಲ್ಲಿನ ಬಂಡೆಗಳು ಬ್ಲಾಸ್ಟ್ ಮೌನವಾದ ಕಂದಾಯ ಇಲಾಖೆ ಅಧಿಕಾರಿಗಳು. ಪೊಲೀಸರಿಂದ ವಾಹನ ವಶ, ದೂರು ದಾಖಲು,

 

ನೆಲಮಂಗಲ : ಜಾನುವಾರುಗಳಿಗೆ ಆಸರೆಯಾಗಿದ್ದ ಗೋಮಾಳದ ಹುಲ್ಲುಗಾವಲಿನಲ್ಲಿ ಮಣ್ಣು ಕಳ್ಳತನ ಮಾಡುವ ಜತೆ ಬಂಡೆಗಳನ್ನು ಬ್ಲಾಸ್ಟ್ ಮಾಡಿ ಸಾಗಾಟ ಮಾಡಿರುವ ಪ್ರಕರಣ ದಾಸನಪುರ ಹೋಬಳಿಯ ಕೆಂಗನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದ್ದು ದೂರು ದಾಖಲಾಗಿದೆ.

 

ನೆಲಮಂಗಲ ಪೊಲೀಸ್‌ ಉಪವಿಭಾಗ ವ್ಯಾಪ್ತಿಯ ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿ ಗ್ರಾಮದ ಸರ್ವೆ ನಂ.12ರಲ್ಲಿ 6ಎಕರೆಗೂ ಹೆಚ್ಚು ಗೋಮಾಳ ಜಾಗವಿದ್ದು ಗ್ರಾಮದ ಜಾನುವಾರುಗಳ ಹುಲ್ಲುಗಾವಲಿಗೆ ಮೀಸಲಾಗಿತ್ತು. ಕೆಲ ವ್ಯಕ್ತಿಗಳು ಮಣ್ಣು,ಕಲ್ಲು ಮಾರಾಟ ಮಾಡುವ ಜತೆ ಸರಕಾರಕ್ಕೆ ಅನುಭವದಲ್ಲಿ ಇದ್ದೇವೆ ಎಂದು ಬಿಂಬಿಸಿಕೊಳ್ಳಲು ಹುಲ್ಲುಗಾವಲನ್ನು ನಾಶ ಮಾಡಿದ್ದಾರೆ. ಇದರ ಬಗ್ಗೆ ತಿಳಿದ ತಕ್ಷಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಹೋಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

 

ಆ‌ರ್ ಐಗೆ ಗೊತ್ತಿಲ್ಲವಂತೆ : ಸ್ಥಳೀಯವಾಗಿ ನಡೆಯುವ ಸಮಸ್ಯೆಗಳು, ಸವಲತ್ತುಗಳನ್ನು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲು ಗ್ರಾಮಲೆಕ್ಕಾಧಿಕಾರಿ ಹಾಗೂ ರಾಜಸ್ವನಿರೀಕ್ಷಕರು(ಆರ್‌ಐ) ಗ್ರಾಮಮಟ್ಟದಲ್ಲಿರುತ್ತಾರೆ. ಆದರೆ ಐದಾರು ದಿನದಿಂದ ಖಾಸಗಿವ್ಯಕ್ತಿಗಳು ಸರಕಾರಿ ಜಾಗದಲ್ಲಿ ಬಂಡೆ ಬ್ಲಾಸ್ಟ್ ಮಾಡಿ ಮಣ್ಣು,ಕಲ್ಲುಗಳ ಸಾಗಾಟ ಮಾಡಿ ಸರಕಾರಿ ಜಾಗ ಒತ್ತುವರಿ ಮಾಡಲು ಮುಂದಾಗಿದರು ಕೂಡ ಆರ್‌ಐ ವಿಜಯಕುಮಾರ್‌ಗೆ ಪ್ರಶ್ನೆ ಮಾಡಿದಾಗ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ. ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಉತ್ತರ ಪುಷ್ಠಿ ನೀಡಿದಂತಾಗಿದೆ.

 

ಪೋಟೋ ವೈರಲ್ : ಗೋಮಾಳ ಜಾಗದಲ್ಲಿ ಬಂಡೆ ಬ್ಲಾಸ್ಟ್ ಮಾಡಿ ಸಾಗಾಟ

ಮಾಡುತ್ತಿರುವ ಪೋಟೋ,ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ * ನಿರ್ಲಕ್ಷ್ಯಕ್ಕೆ ಆ ಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಮಾದನಾಯಕನಹಳ್ಳಿ ವ್ಯಾಪ್ತಿಯ ಕೆಂಗನಹಳ್ಳಿಯ ಗೋಮಾಳದಲ್ಲಿ ಬಂಡೆ ಹೊಡೆಯುತ್ತಿರುವ ವಿಚಾರದಲ್ಲಿ ಎರಡು ವಾಹನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದ್ದು ದೂರು ಸಹ ದಾಖಲಾಗಿದೆ.

 

ಮುರುಳಿ ಇನ್‌ಸೆಕ್ಟರ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆ

ಕೋಟ್

ಕೆಂಗನಹಳ್ಳಿ ಸರ್ವೆ ನಂ.12ರ ಗೋಮಾಳದಲ್ಲಿ ಬಂಡೆ ಹೊಡೆಯುವುದು,ಮಣ್ಣು ತೆಗೆಯುವ ಬಗ್ಗೆ ಮಾಹಿತಿ ಇಲ್ಲ, ಈಗಲೇ ವಿಚಾರಿಸಿ ದೂರು ದಾಖಲು ಮಾಡುತ್ತೇವೆ -ವಿಜಯಕುಮಾ‌ರ್ ಆರ್‌ಐ ಕೆಂಗನಹಳ್ಳಿ ವ್ಯಾಪ್ತಿ

error: Content is protected !!