(ವರದಿ:-ಸಂತೋಷ್ ಗುಬ್ಬಿ )
ಗುಬ್ಬಿ:- ಮಾಜಿ ಶಾಸಕರ ಮಗ ಮತ್ತು ಸಹಚಾರರಿಂದ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಯ ಕಾರು ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕಾರ್ಯನಿರ್ವಹಣಾ ಅಧಿಕಾರಿ (ಇ.ಓ) ಶಿವಪ್ರಕಾಶ್ ಅವರ ಕಾರು ಅಡ್ಡಗಟ್ಟಿ ಮಾಜಿ ಶಾಸಕ ವೀರಣ್ಣ ಗೌಡ ರವರ ರವರ ಮಗ ಶ್ರೀನಿವಾಸ್ ಮತ್ತು ಸಹಚಾರರು ಏಕವಚನದಲ್ಲಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಶನಿವಾರ ಮಧ್ಯಾಹ್ನ 3:00 ರ ಸಮಯಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನೇತೃತ್ವದಲ್ಲಿ ಕೋರ್ಟ್ ಆಯೋಜಿಸಿದ್ದು.ಶ್ರೀನಿವಾಸ್ ನನ್ನ ವಿರುದ್ಧ ಕೋರ್ಟ್ ನಲ್ಲಿ ತೀರ್ಪು ನೀಡಬಹುದು ಎಂಬ ಭಯದಿಂದ ಅಧಿಕಾರಿಯನ್ನು ತಡೆದು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಹಚರರಿಂದ ಹಲ್ಲೆಗೆ ಮುಂದಾದರು ಎನ್ನಲಾಗುತ್ತಿದೆ.
ಕನ್ನಡ ರಥೋತ್ಸವ ತಾಲೂಕಿಗೆ ಆಗಮಿಸಿದ್ದು ಕೆಲವು ಮಾರ್ಗವಾಗಿ ಬೇರೆ ತಾಲೂಕಿಗೆ ರಥೋತ್ಸವ ತೆರಳಬೇಕಾಗಿದ್ದು ಬೀಳ್ಕೊಡುಗೆ ನೀಡಿ ಬರಲು ತುರ್ತಾಗಿ ತೆರಳುತ್ತಿದ್ದು ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್ ರವರ ಕಾರನ್ನು ಶ್ರೀನಿವಾಸ್ ಎಂಬ ವ್ಯಕ್ತಿ ಅಡ್ಡಗಟ್ಟಿ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
_______________________________
ಶನಿವಾರ ಗುಬ್ಬಿ ತಾಲೂಕಿಗೆ ಕನ್ನಡ ರಥೋತ್ಸವ ಆಗಮಿಸಿದ್ದು ಬೆಳಿಗ್ಗೆ ಸ್ವಾಗತಿಸಿ ತದನಂತರ ಬೇರೆ ತಾಲೂಕಿಗೆ ಬೀಳ್ಕೊಡಿಗೆ ನೀಡುವ ತುರ್ತಾಗಿ ತಮ್ಮ ಕಚೇರಿಯ ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಶ್ರೀನಿವಾಸ ಹಾಗೂ ಇನ್ನಿತರೆ ಕೆಲವು ಸಹಚಾರರು ನನ್ನನ್ನು ಅಡ್ಡಗಟ್ಟಿ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
*ತಾಲೂಕು ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್*

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ