November 8, 2025

ಜಮೀರ್​ ಹೇಳಿಕೆಯಿಂದ ಸಿಡಿದೆದ್ದ ನೆಲಮಂಗಲ ಒಕ್ಕಲಿಗ ಸಮುದಾಯ : ಜಮೀರ್ ಪ್ರತಿಕೃತಿದಹನ ರಾಜೀನಾಮೆಗೆ ಆಗ್ರಹ!

 

ನೆಲಮಂಗಲ :: ಸಚಿವ ಜಮೀರ್ ಅಹಮದ್ ಖಾನ್​​ ವಿರುದ್ಧ ಒಕ್ಕಲಿಗ ಯುವ ವೇದಿಕೆ ಹಾಗೂ ಒಕ್ಕಲಿಗ ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸಿದ್ದು. ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಜಮೀರ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ನೆಲಮಂಗಲದ ಕುಣಿಗಲ್ ಬೈಪಾಸ್ ನಲ್ಲಿ ಸೇರಿದ ನೂರಾರು ಒಕ್ಕಲಿಗ ಸಮುದಾಯದ ಮುಖಂಡರು ಮಾಜಿ ಪ್ರಧಾನಿ ದೇವೆಗೌಡ ಹಾಗೂ ಕುಮಾರಸ್ವಾಮಿ ವಿರುದ್ದ ಅವಹೇಳನಕಾರಿ ಪದ ಬಳಕೆ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿ ಜಮೀರ್ ಅಹಮದ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಮೀರ್ ಪ್ರತಿಕೃತಿದಹಿಸಿದರು

ಮುಖ್ಯ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ, ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಜಮೀರ್ ರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ದೇವೇಗೌಡರು ಒಂದು ಸಮುದಾಯದ ನಾಯಕರಲ್ಲ, ರಾಜ್ಯದ ಏಳೂವರೆ ಕೋಟಿ ಜನರ ನಾಯಕ. ವರ್ಣಬೇಧ ನೀತಿ ಮೂಲಕ ಜನಾಂಗೀಯ ನಿಂದನೆ ಮಾಡಿದ್ದು ಜಮೀರ್ ಒಕ್ಕಲಿಗ ಸಮುದಾಯವನ್ನು ಅಪಮಾನಿಸಿದ್ದಾರೆ. ಇನ್ನು ಮುಂದೆ ಇದೇ ರೀತಿ ನಾಲಿಗೆ ಹರಿಯಬಿಟ್ಟರೆ, ನಾಡಿನ ಜನರು ತಕ್ಕ ಶಾಸ್ತಿ ಮಾಡುತ್ತಾರೆ. ಒಂದು ವೇಳೆ ಸಂಪುಟದಿಂದ ವಜಾ ಮಾಡದಿದ್ದರೆ, ಜಮೀರ್ ಹೇಳಿಕೆ ವಿರೋಧಿಸಿ ರಾಜ್ಯವ್ಯಾಪ್ತಿ ಉಗ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕರಾರು ಆಕ್ರೋಶ ವ್ಯಕ್ತಪಡಿಸಿದರು.

 

ಕುಣಿಗಲ್ ಬೈಪಾಸ್ ಬಳಿ ಮಾನವ ಸರಪಳಿ ಮಾಡಿ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು, ಬೆಂಗಳೂರು, ಮಂಗಳೂರು ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಪಕ್ಷಬೇದ ಮರೆತು ಬಿಜೆಪಿ. ಜೆಡಿಎಸ್. ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಮಾನವ ಸರಪಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತ ಉಂಟಾಗಿತ್ತು. ಕುಣಿಗಲ್ ಬೈಪಾಸ್ ನಿಂದ ನೆಲಮಂಗಲ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಿ ಸಚಿವ ಸ್ಥಾನ ದಿಂದ ವಜಾ ಮಾಡಬೇಕು ಎಂದು ತಹಶೀಲ್ದಾರ್ ಮುಖೇನ ಮುಖ್ಯಮಂತ್ರಿಗೆ ತಾಲೂಕು ಒಕ್ಕಲಿಗರ ಸಂಘ ಹಾಗೂ ಯುವ ವೇದಿಕೆ ಮುಖಂಡರುಗಳು ಒತ್ತಾಯಿಸಿದರು.

 

ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀನಿವಾಸ್ ಮೂರ್ತಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದ್ರಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ ಕೆ ನಾಗರಾಜು. ಉಪಾಧ್ಯಕ್ಷ ಸೈದಾಮಿ ಪಾಳ್ಯ ರಮೇಶ್. ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ, ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಮಾಜಿ ಅಧ್ಯಕ್ಷ ಮಧುಸೂಧನ್, ಎಚ್.ಜಿ.ರಾಜಣ್ಣ ಪ್ರದಾನ ಕಾರ್ಯದರ್ಶಿ ಸತೀಶ್, ನಗರಸಭೆ ಅಧ್ಯಕ್ಷ ಅಂಜನಮೂರ್ತಿ(ಪಾಪಣ್ಣಿ), ಶಿವಕುಮಾರ್, ಕರವೇ ಉಮೇಶ್ ಗೌಡ. ರಘುವರ್ಮ.ಮುಖಂಡರಾದ ಹನುಮಂತರಾಜು, ಪುರುಷೋತ್ತಮ್, ಮನುಗೌಡ, ದೇಗನಹಳ್ಳಿ ಸುರೇಶ್, ಅಂಜನಮೂರ್ತಿ, ಪ್ರದೀಪ್ ಕುಮಾರ್, ಲೀಲಾಕುಮಾರ್, ಸುರೇಂದ್ರ, ಶೇಖರ್, ಗೋಪಿ, ಕುಲವಳ್ಳಿ ಸುರೇಶ್, ವಾತ್ ಕುಂಟೆ ರಮೇಶ್, ಕೃಷ್ಣ, ರಂಗಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್. ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದರು.

error: Content is protected !!