November 8, 2025

ನೆಲಮಂಗಲ :ಅಮಾಯಕನ ಆಸ್ತಿ ಕಬಳಿಸಲು ನೆಲಮಂಗಲ ನಗರಸಭೆ ಬಿಲ್ ಕಲೆಕ್ಟರ್ ರಂಜನ್ ಕುಮಾರ್ ಸಂಚು ಗುಂಡಾ ವರ್ತನೆ:ಆರೋಪ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಂಜನ್ ಕುಮಾರ್ ಗುಂಡಾ ವರ್ತನೆಗೆ ಗೊರಿನಬೆಲೆ ಗ್ರಾಮಸ್ಥರು ನಲುಗಿಹೋಗಿರುವ ಆರೋಪ ಕೇಳಿಬಂದಿದ್ದು.ರಂಜನ್ ಕುಮಾರ್ ತಂದೆ ರೇವಣ್ಣ ಕೂಡ ನೆಲಮಂಗಲ ನಗರಸಭೆಯ ಸಿಬ್ಬಂದಿಯಾಗಿದ್ದಾರೆ.ಅಪ್ಪ ಮಕ್ಕಳ ಕಾಟಕ್ಕೆ ಗ್ರಾಮದ ಜನ ಬೆಸತ್ತಿದ್ದಾರೆ. ತನ್ನ ಮನೆಯ ಪಕ್ಕದ ವಾಸಿ ಕುಮಾರ್ ಎನ್ನುವವರ ಜಾಗ ಕಬಳಿಸಲು ಸಂಚು ರೂಪಿಸಿ ಬೆದರಿಕೆ ಹಾಕಿರುವ ಆರೋಪ ಈತ ಮತ್ತು ಈತನ ಕುಟುಂಬದ ವಿರುದ್ಧ ಕೇಳಿ ಬಂದಿದ್ದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕುಮಾರ್ ಎನ್ನುವವರು ದೂರು ದಾಖಲಿಸಿದ್ದಾರೆ. ನಗರ ಸಭೆಯಲ್ಲಿ ಬಿಲ್ ಕಲೆಕ್ಟರ್ ಇದ್ದೇನೆ ನನಗೆ ರಾಜಕೀಯ ಬಲ, ಹಣ ಬಲ ಎರಡು ಇದೆ ನನ್ನನ್ನು ಯಾರು ಏನು ಮಾಡೋಕೆ ಆಗೋಲ್ಲ ಎಂದು ಬೆದರಿಕೆ ಹಾಕಿರುವ ವಿಡಿಯೋ ಸದ್ಯ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿದ್ದು ರಂಜನ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಕೂಡಲೇ ನಗರ ಸಭೆ ಆಯುಕ್ತರು ಬಿಲ್ ಕಲೆಕ್ಟರ್ ರಂಜನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ನೆಲಮಂಗಲ ನಗರ ಸಭೆ ಕಚೇರಿಯಲ್ಲಿಯೂ ರಂಜನ್ ಕುಮಾರ್ ಇದೆ ರೀತಿಯಲ್ಲಿ ಸಾರ್ವಜನಿಕರಿಗೆ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆದರಿಕೆ ಹಾಕುವ ಪ್ರೌರುತ್ತಿ ಈತನದ್ದಾಗಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಇನ್ನಾದ್ರೂ ನೆಲಮಂಗಲ ನಗರ ಸಭೆ ಆಯುಕ್ತರು ಈತನನ್ನು ಅಮಾನತ್ತು ಪಡಿಸಿ ಕಡಿವಾಣ ಹಾಕುತ್ತಾರ ಕಾದು ನೋಡಬೇಕಿದೆ.

error: Content is protected !!