November 8, 2025

ಮಾತೃ ಭೂಮಿ ಯುವಕರ ಸಂಘ ಜಾನಪದ ಗೀತೆಯಲ್ಲಿ ಪ್ರಥಮ

ಮಾತೃಭೂಮಿ ಯುವಕರಸಂಘ ಜಾನಪದ ಗೀತೆಯಲ್ಲಿ ಪ್ರಥಮ ಸ್ಥಾನ ನೆಲಮಂಗಲ: ಗ್ರಾಮಾಂತರ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ನೆಲಮಂಗಲದ ಮಾತೃಭೂಮಿ ಯುವಕರ ಸಂಘ ಜಾನಪದ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಅಯೋಜಿಸಿದ್ದ ಪ್ರತಿ ವರ್ಷದಂತೆ ಈ ವರ್ಷವು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿದ್ದು ಈ ಬಾರಿಯ ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ ನೆಲಮಂಗಲದ ಮಾತೃಭೂಮಿ ಯುವಕರ ಸಂಘದ ಪವನ್ ಕುಮಾರ್ ನಾಯ್ಕ ತಂಡ ರಾಜ್ಯ ಮಟ್ಟಕ್ಕೆ ಯಾಗಿದ್ದು ಸಂಸದ ಡಾ.ಕೆ.ಸುಧಾಕರ್ ಅಭಿನಂಧಿಸಿದ್ದಾರೆ.

ಮಾತೃಭೂಮಿ ಯುವಕರ ಸಂಘದ ಪವನ್‌ಕುಮಾರ್‌ನಾಯ್ಕ್ ಮಾತನಾಡಿ ಕಳೆದ 10 ವರ್ಷದಿಂದ ಯುವಜನೋತ್ಸವ ಹಾಗೂ ಯುವಜನಮೇಳ ಕಾರ್ಯಕ್ರಮ ಭಾಗವಹಿಸುತ್ತಿದ್ದು ಕಳೆದ 10ವರ್ಷವೂ ನೆಲಮಂಗಲದ ಮಾತೃಭೂಮಿ ಯುವಕರ ಸಂಘ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಜತೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು 3 ಭಾರಿ ರಾಷ್ಟ್ರದಲ್ಲಿ ಭಾಗಹಿಸಿದೆ. ಜಾನಪದ ಉಳಿವಿಗೆ ಪ್ರತಿಯೊಬ್ಬರ ಬೆಂಬಲ ಅತ್ಯಂತ ಮುಖ್ಯವಾಗಿದೆ. ನಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.

ಶುಭಾಶಯ: ಜಿಲ್ಲಾಮಟ್ಟದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದ ಹಿನ್ನಲೆ ಶಾಸಕ ಎನ್.ಶ್ರೀನಿವಾಸ್, ಕನ್ನಡ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಸಿಂಚನ ಕಲಾ ಕೇಂದ್ರ ಟ್ರಸ್ಟ್ ಅದ್ಯಕ್ಷ ಸಿ.ಹೆಚ್.ಸಿದ್ದಯ್ಯ ಸೇರಿದಂತೆ ಸಾಕಷ್ಟು ಮಂದಿ ಶುಭಾಶಯ ಕೋರಿದ್ದಾರೆ.

ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರಾದ ಪವನ್‌ಕುಮಾರ್‌ ನಾಯ್ಕ್, ಎನ್.ಜಿ.ಚೇತನ್‌ಕುಮಾರ್, ಗಂಗರಾಜು, ನವೀನ್‌ಕುಮಾರ್, ⁠ಅಭಿಷೇಕ್, ಸಂಜು, ಪ್ರೀತಮ್, ಪೂರ್ಣಚಂದ್ರ, ಪ್ರಜ್ವಲ್, ⁠ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!