(ವರದಿ:ಸಂತೋಷ್ ಗುಬ್ಬಿ)
ಗುಬ್ಬಿ:- ಮುಖ್ಯಮಂತ್ರಿ ಸಿದ್ದರಾಮಯ್ಯನವರ ತುಮಕೂರಿನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಇದರ ಹಿನ್ನೆಲೆ ಜಿಲ್ಲಾ ಸಂಚಾಲಕ ನಿಟ್ಟೂರು
ರಂಗಸ್ವಾಮಿ ರವರ ದಲಿತ ಮುಖಂಡರ ತಂಡ ಕಪ್ಪು ಪಟ್ಟಿ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದಂತೆ ದಲಿತ ಮುಖಂಡರನ್ನು ಗುಬ್ಬಿ ಪೊಲೀಸ್ ಠಾಣೆಯಲ್ಲಿ ತಡೆಹಿಡಿದು ಕೂರಿಸಲಾಯಿತು.
ತುಮಕೂರಿನಲ್ಲಿ ಡಿಸೆಂಬರ್ 2 ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ನಿಟ್ಟೂರು ರಂಗಸ್ವಾಮಿ ರವರನ್ನು ತಮ್ಮ ನಿವಾಸದಿಂದ ಕರತಂದು ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿ ಸಂಜೆ 4 ರ ಸಮಯಕ್ಕೆ ಕಳುಹಿಸಿಕೊಡಲಾಯಿತು..
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ದಲಿತ ಮುಖಂಡರು ತೆರಳಿ ಒಳ ಮೀಸಲಾತಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತಾರೆ ಎಂಬ ನಿಟ್ಟೂರು ರಂಗಸ್ವಾಮಿ ರವರ ಹೇಳಿಕೆಯನ್ನು ಆಧರಿಸಿ ಪೊಲೀಸ್ ಠಾಣೆಗೆ ಕರೆತಂದು ಸಿಎಂ ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ನೀಡಬಾರದು ಎಂಬ ಉದ್ದೇಶದಿಂದ ದಲಿತ ಮುಖಂಡರನ್ನು ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆಯಿಂದ ಸಂಜೆ 4 ಸಮಯದವರೆಗೂ ಠಾಣೆಯಲ್ಲಿ ಕುರಿಸಿಕೊಳ್ಳಲಾಯಿತು.
ತುಮಕೂರಿನಲ್ಲಿ ಕೆಲವು ದಲಿತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತುಳಿಯನ್ನು ಜಿಲ್ಲೆಯಲ್ಲಿ ನಿರ್ಮಿಸುವುದು ಹಾಗೂ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ಕಡಬ ಶಂಕರ್ ,ಈಶ್ವರ್ಯ ಅದಲಗೆರೆ ,ನಟರಾಜ್ ಕುಂದರನಹಳ್ಳಿ, ಕಲ್ಲೇಶ್ ಎಂಎನ್ ಕೋಟೆ. ,ರವಿಕುಮಾರ ಕಲ್ಲೂರು,ಮಹೇಶ್ ರವಿಕುಮಾರ್ ಜಿ.ಹೊಸಹಳ್ಳಿ, ರಂಗಸ್ವಾಮಿ ತೊಗರಿಘಟ್ಟ. ಹಾಜರಿದ್ದರು.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ