November 8, 2025

ಸರ್ಕಾರಿ ಆಸ್ಪತ್ರೆಯಲ್ಲಿ ಜಾತಿ ಆಡಳಿತ ವಾಸನೆ!? ಸರ್ವಜನಾಂಗದ ಶಾಂತಿಯ ತೋಟದಲ್ಲಿ ಎಂತಾ ದುರ್ನಡತೆ!!

 

ನೆಲಮಂಗಲ: ನಗರದ ಹೃದಯಭಾಗದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾತಿ ಆಡಳಿತದ ವಾಸನೆ ತಾಲೂಕು ಕಚೇರಿವರೆಗೂ ಹಬ್ಬಿದೆಎಂದು ಹೆಸರು ಹೇಳದೆ ಅಧಿಕಾರಿಗಳುಕಣ್ಣೀರು ಹಾಕುತ್ತಿದ್ದಾರೆ ಎನ್ನಲಾಗಿದೆ ತಾಲ್ಲುಕ್ ಸಾರ್ವಜನಿಕ ಆಸ್ಪತ್ರೆಗೆ ಹೊಸದಾಗಿ ನೇಮಕವಾಗಿರುವ ಶುಶ್ರೂಷಾಧಿಕಾರಿ ಎಸ್.‌ ದೇವಿರಮ್ಮ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಆಸ್ಪತ್ರೆಯ ಆಡಳಿತದಲ್ಲಿ ಜಾತಿ ವ್ಯವಸ್ಥೆ ಸೃಷ್ಠಿ ಮಾಡಿದ್ದಾರೆ ಎಂದು ಹೆಸರೇಳಲು ಇಚ್ಚಿಸದ ಕೆಲವು ಅಧಿಕಾರಿಗಳು ಆರೋಪಿಸಿದ್ದಾರೆ.

ಈಅಧಿಕಾರಿ ಕೆ ಸಿ ಜೆನರಲ್ ಆಸ್ಪತ್ರೆಯಲ್ಲೂ ಸಹ ಹಿರಿಯ ಅಧಿಕಾರಿಗಳ ಜೊತೆ ಜಗಳವಾಡಿಕೊಂಡು ಮನಸ್ತಾಪ ಮಾಡಿಕೊಂಡಿದ್ದರು ಎನ್ನಲಾಗಿದ್ದು ಈಕೆಗೆ ಬುದ್ದಿಕಲಿಸಲು ನೆಲಮಂಗಲ ತಾಲ್ಲೂಕು ಆಸ್ಪತ್ರೆಗೆ ಶಿಕ್ಷಾರ್ಹ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ನೂತನಾಗಿ ಶುಶ್ರೂಷಾಧಿಕಾರಿ ನೇಮಕವಾದ ಬಳಿಕ ದುರುದ್ದೇಶ ಪೂರ್ವಕವಾಗಿ ಡ್ಯೂಟಿ ರೋಸ್ಟರ್‌ ಬದಲಾಯಿಸಿದ್ದು ಇದರಿಂದ ಹಲವು ಸಿಬ್ಬಂದಿಗಳಿಗೆ ನಿತ್ಯ ಸಮಸ್ಯೆ ಎದುರಾಗಿದೆಯಂತೆ. ಕೆಲವರನ್ನು ವೈಯಕ್ತಿಕವಾಗಿ ಟಾರ್ಗೆಟ್‌ ಮಾಡಿ ಡ್ಯೂಟಿ ರೋಸ್ಟ್ರರ್‌ ಅನ್ನು ಬದಲಾಯಿಸಿದ್ದಾರೆ, ಇದರಿಂದ ತಮ್ಮ ಸಮುದಾಯದ ಕೆಲ ಸಿಬ್ಬಂದಿಗಳಿಗೆ ಅನುಕೂಲ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಇದ್ದ ಡ್ಯೂಟಿ ರೋಸ್ಟರ್‌ ಅನ್ನು ಮುಂದುವರೆಸಬೇಕು ಎಂದು ಸಿಬ್ಬಂದಿ ವರ್ಗದವರು ಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ಶುಶ್ರೂಷಾಧಿಕಾರಿ ದೇವಿರಮ್ಮ ತಮ್ಮ ಕಚೇರಿ ಒಳಗೆ ಯಾರನ್ನು ಬರೆದಂತೆ ತಡೆಯುವು ದರಹಿಂದೆ ಹಲವು ಅನುಮಾನಗಳು ಸಹ ಮೂಡಿವೆ.

ಕರೆ ಸ್ವೀಕರಿಸದ ಡಿಹೆಚ್‌ಒ: ಇನ್ನೂ ಸರ್ಕಾರಿ ಆಸ್ಪತ್ರೆಯಲ್ಲಿನ ಈ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸುನೀಲ್‌ ಕುಮಾರ್‌ ಅವರಿಗೆ ಹಲವು ಭಾರಿ ಕರೆ ಮಾಡಿದರು ಸ್ವೀಕರಿಸಿರುವುದಿಲ್ಲ.

error: Content is protected !!