November 8, 2025

ಜಗದೀಶ್‌ಚೌದರಿ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾಧ್ಯಕ್ಷರಿಗೆ ಪತ್ರಕರ್ತರ ಮನವಿ

 

ನೆಲಮಂಗಲ : ಪತ್ರಕರ್ತರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಧಮ್ಮಿ ಹಾಕಿರುವ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ ಚೌದರಿ ಉಚ್ಚಾಟನೆ ಆಗಬೇಕು, ಬಹಿರಂಗವಾಗಿ ಪತ್ರಕರ್ತರಿಗೆ ಕ್ಷಮೆಯಾಚಿಸಬೇಕು ಎಂದು ಪ್ರೆಸ್‌ಕ್ಲಬ್‌ ಕೌನ್ಸಿಲ್‌ನ ಜಿಲ್ಲಾಧ್ಯಕ್ಷ ಮಂಜುನಾಥ್ ಒತ್ತಾಯ ಮಾಡಿದರು.

ತಾಲೂಕಿನ ಸೋಂಪುರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪನವರಿಗೆ ತಾಲೂಕು ಅಧ್ಯಕ್ಷ ಜಗದೀಶ್‌ ಚೌದರಿ ವಿರುದ್ಧ ದೂರು ನೀಡಿ ಮಾತನಾಡಿದರು.

ಅಕ್ಕ. ಅಮ್ಮ ಎಂಬುದಾಗಿ ಮಾತನಾಡುವ ಪ್ರವೃತ್ತಿ ಬಿಜೆಪಿ ಪಕ್ಷದಲ್ಲ, ಆದರೆ ರೌಡಿಶೀಟರ್ ಆಗಿರುವ ಜಗದೀಶ್‌ ಚೌದರಿ ಪತ್ರಕರ್ತರಿಗೆ ಅವಾಚ್ಯವಾಗಿ ಮಾತನಾಡಿ ಧಮ್ಮಿ ಹಾಕಿ ಎಚ್ಚರಿಕೆ ನೀಡಿರುವುದು ಸರಿಯಲ್ಲ ಆದ್ದರಿಂದ ಈತನ ವಿರುದ್ದ ಶಿಸ್ತುಕ್ರಮ ಕೈಗೊಳ್ಳಬೇಕು,ಪತ್ರಕರ್ತರಿಗೆ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಇಲ್ಲದಿದ್ದರೆ ಬಿಜೆಪಿ ಕಾರ್ಯಕ್ರಮಗಳಿಗೆ ಕಪ್ಪುಪಟ್ಟಿ ಧರಿಸಿ ಭಾಗವಹಿಸಲು ತಿರ್ಮಾನಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ಸಂಸ್ಕೃತಿ, ಸಂಸ್ಕಾರದ ಶಿಸ್ತು ಇದೆ ಆದರೆ ನೆಲಮಂಗಲ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ ಪತ್ರಕರ್ತರಿಗೆ ನಿಂದನೆ ಮಾಡಿ ಧಮ್ಮಿ ಹಾಕಿರುವುದು ಖಂಡನೀಯ, ಆತ ಪತ್ರಕರ್ತರಿಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು ಆತನ ಗಡಿಪಾರಿಗೂ ಆಗ್ರಹಿಸುತ್ತೇವೆ ಎಂದರು.

ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಅಧ್ಯಕ್ಷ ಗಂಗಾಧರ್ ಟಿ.ಜಿ ಮಾತನಾಡಿ ಬಹಳಷ್ಟು ವರ್ಷಗಳಿಂದ ಜಗದೀಶ್ ಚೌದರಿ ಪತ್ರಕರ್ತರಿಗೆ ಧಮ್ಮಿ ಹಾಕುವುದು, ಬ್ಲಾಕ್ ಮೇಲ್ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ಟಿ.ಬೇಗೂರು ಗ್ರಾಮಪಂಚಾಯಿತಿ ಕಚೇರಿಯ ಆವರಣದಲ್ಲಿ ಪಿಡಿಓ ವಿರುದ್ಧ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ಸದಸ್ಯರ ಹೇಳಿಕೆಯನ್ನು ಪ್ರಕಟ ಮಾಡಿದ್ದಕ್ಕೆ ಸುದ್ದಿ ಮಾಡಿದ ಪತ್ರಕರ್ತರಿಗೆ ಅವಾಚ್ಯಪದಗಳಿಂದ ನಿಂದನೆ ಹಾಗೂ ಧಮ್ಮಿ ಹಾಕಿದ್ದಾನೆ.ಈತ ರೌಡಿಶೀಟರ್ ಆಗಿ ಪತ್ರಕರ್ತರಿಗೆ ಧಮ್ಮಿ ಹಾಗೂ ಬ್ಲಾಕ್‌ಮೇಲ್ ಮಾಡುತ್ತಿರುವುದು ಖಂಡನೀಯ. ಈಗಗಾಲೇ ಬಿಜೆಪಿ ಜಿಲ್ಲಾಧ್ಯಕರಿಗೆ ಮನವಿ ನೀಡಿದ್ದು ಆತನ ವಿರುದ್ಧ ತಾಲೂಕುಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಸಂದರ್ಭದಲ್ಲಿ ಪ್ರೆಸ್‌ಕ್ಲಬ್ ಕೌನ್ಸಿಲ್ ರಾಜ್ಯಕಾರ್ಯದರ್ಶಿ ಆರ್.ಕೊಟ್ರೆ ಟ್ರೇಶ್,ನಗರ www ಪ್ರಧಾನಕಾರ್ಯದರ್ಶಿ ಸಿದ್ದರಾಜು,ಪವನ್, ಅಧ್ಯಕ್ಷ ಭಾನುಪ್ರಕಾಶ್, ತಾಲೂಕು ವಿಜಯ್, ಪದಾಧಿಕಾರಿಗಳಾದ ಅಲಿಂ, ಗುರುಪ್ರಸಾದ್, ಪತ್ರಕರ್ತರಾದ ಪ್ರದೀಪ್, ರುದ್ರೇಶ್ ಸೇರಿದಂತೆ ಅನೇಕರಿದ್ದರು.

error: Content is protected !!