November 8, 2025

ಮಾಜಿ ಪುರಸಭಾ ಅಧ್ಯಕ್ಷರಾದ ಎ.ಪಿಳ್ಳಪ್ಪ ಇನ್ನಿಲ್ಲ 

ನೆಲಮಂಗಲ ಟೌನ್ ಮಾಜಿ ಪುರಸಭೆ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, TAPCMS ಹಾಗೂ ಟೌನ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರು ಆದ ಎ. ಪಿಳ್ಳಪ್ಪ ರವರು (58) ನಿಧನ ಹೊಂದಿದ್ದು ಇವರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆಯನ್ನು ದಿನಾಂಕ:-08-1-2025 ರ ಬುಧವಾರ ಮಧ್ಯಾಹ್ನ ಸಮಯ 03:00ಘಂಟೆಗೆ “ಅಮ್ಮು ಫಾರ್ಮ್ ಹೌಸ್ “ ಬೈರಶೆಟ್ಟಹಳ್ಳಿ, ಗೊಲ್ಲಹಳ್ಳಿ ಹತ್ತಿರ ನೆರವೇರಲಿದೆ.

ಇವರ ನಿಧನಕ್ಕೆ ಗೃಹ ಸಚಿವರಾದ ಪರಮೇಶ್ವರ್, ನೆಲಮಂಗಲ ಶಾಸಕರಾದ ಶ್ರೀನಿವಾಸ್, ಮಾಜಿ ಶಾಸಕರಾದ ಡಾ:ಕೆ. ಶ್ರೀನಿವಾಸ್ ಮೂರ್ತಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿಎಂಎಲ್ ಕಾಂತರಾಜು, ನೆಲಮಂಗಲ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ನಾರಾಯಣ ಗೌಡ್ರು, ಮಾಜಿ ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಪೂರ್ಣಿಮ ಸುಗ್ಗರಾಜ್, ನಗರ ಸಭೆ ಮಾಜಿ ಉಪಾಧ್ಯಕ್ಷೆ ರಾದ ಸುಜಾತ ಮುನಿಯಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಹನುಮಂತರಾಯಪ್ಪ , ದಲಿತ ಮುಖಂಡರಾದ ಬಿ ಆರ್ ಭಾಸ್ಕರ್ ಪ್ರಸಾದ್,

ಹಾಗೂ ಪಕ್ಷದ ಕಾರ್ಯಕರ್ತರು, ದಲಿತ ಮುಖಂಡರುಗಳು ಸೇರಿದಂತೆ ಗಣ್ಯಾತಿ ಗಣ್ಯರುಗಳು ಸಂತಾಪ ಸೂಚಿಸಿದಾರೆ.

error: Content is protected !!