*ಜೇವರ್ಗಿ:* ಓರ್ವ ಯುವಕನ ಮೇಲೆ ನ್ಯಾಯಾ ಲಯದ ಆವರಣದಲ್ಲಿಯೇ ಮೂವರು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬುಧವಾರ ಸಂಜೆ 4-30ಕ್ಕೆ ಪಟ್ಟಣದಲ್ಲಿ ವರದಿಯಾಗಿದೆ ಹಲ್ಲೆಗೆ ಒಳಗಾದ ವ್ಯಕ್ತಿ ಯನ್ನು ಯಾತನೂರ್ ಗ್ರಾಮದ ನಿವಾಸಿ ದೇವಿಂದ್ರ ತಂದೆ ಗುಂಡಪ್ಪ ಯಾತನೂರ್ (27) ಎಂದು ಗುರುತಿಸಲಾಗಿದೆ. ಯಾತ ನೂರ್ ಗ್ರಾಮದ ನಿವಾಸಿಗಳಾದ ಸಿದ್ದು ತಂದೆ ಮಲ್ಲಪ್ಪ ಪೋಲಿಸ್ ಪಾಟೀಲ್ ಯಾತನೂರ್, ಶಿವಲಿಂಗಪ್ಪ ತಂದೆ ನಿಂಗಪ್ಪ ಪೊಲೀಸ್ ಪಾಟೀಲ್ ಯಾತನೂರ್. ಶ್ರೀಶೈಲ್ ಕುರನಳ್ಳಿ ಅವರೇ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.
ಹಳೆಯ ದ್ವೇಷ ಇಲ್ಲವೇ ಹೆಣ್ಣಿನ ವಿಷ ಯದಲ್ಲಿ ಮಾರಣಾಂತಿಕ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ತಕ್ಷಣವೇ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಯುವಕ ದೇವಿಂದ್ರ ತಂದೆ ಗುಂಡಪ್ಪ ಯಾತನೂರ್ ಹಲ್ಲೆಕೋರರಲ್ಲಿ ಒಬ್ಬನಾದ ಶಿವಲಿಂಗಪ್ಪ ತಂದೆ ನಿಂಗಪ್ಪ ಪೋಲಿಸ್ ಪಾಟೀಲ್ ಯಾತ ನೂರ್ ಸಹೋದರ ಸಂಗಪ್ಪ ಎಂಬಾತನಿಗೆ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ. ತನ್ನ ತಾಯಿಗೆ ಅನಾರೋಗ್ಯದ ಕಾರಣ ಜಾಮೀನಿನ ಮೇಲೆ ಎರಡೂರು ತಿಂಗಳು ಹೊರಗೆ ಬಂದಿದ್ದ. ಅಷ್ಟೇ ಅಲ್ಲದೇ ಅವರ ಕುಟುಂಬದ ಯುವತಿಗೆ ದೇವಿಂದ್ರ ಪ್ರೀತಿ ಮಾಡಲು ಆರಂಭಿಸಿದ. ಇದರಿಂ ದಾಗಿ ನಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಕೊಂದಿದ್ದಲ್ಲದೇ ನಮ್ಮ ಹೆಣ್ಣು ಮಗಳಿಗೆ ಪ್ರೀತಿ ಮಾಡುತ್ತಿದ್ದೀಯಾ ಎಂದು ಹಲ್ಲೆ ಕೋರರು ಆತನ ಮೇಲೆ ಹಲ್ಲೆ ಮಾಡಿದರು ಎಂದು ತಿಳಿದುಬಂದಿದೆ.
ನ್ಯಾಯಾಲಯಕ್ಕೆ ಬುಧವಾರ ಸಂಜೆ ಹೋದಾಗ ದುಷ್ಕರ್ಮಿಗಳು ಬಂದು ಆತನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ದರೂ ಸಹ ಮೂವರು ಸೇರಿ ನ್ಯಾಯಾಲ ಯದ ಆವರಣಗಳಲ್ಲಿನ ಕಲ್ಲುಗಳನ್ನು ತೆಗೆ ದುಕೊಂಡು ಆತನ ಮೇಲೆ ಹಲ್ಲೆ ಮಾಡಿ ದರು. ಇದರಿಂದ ಆತನಿಗೆ ರಕ್ತಗಾಯಗಳಾ ದವು. ಅಷ್ಟೇ ಅಲ್ಲದೇ ದೇವಿಂದ್ರ ತಂದೆ ಗುಂಡಪ್ಪ ಯಾತನೂರ್‌ನಿಗೆ ಆಟೋದಲ್ಲಿ ದುಷ್ಕರ್ಮಿಗಳು ಅಪಹರಿಸಿಕೊಂಡು ಹೋ ಗಲು ಯತ್ನಿಸಿದರು. ಪ್ರತಿರೋಧದಿಂದಾಗಿ ಹಲ್ಲೆಕೋರರು ಅಲ್ಲಿಂದ ಪರಾರಿಯಾದರು. ನ್ಯಾಯಾಲಯದ ಆವರಣದಲ್ಲಿ ಘಟನೆ ಸಂಭವಿಸಿದ್ದು, ಕೆಲ ಹೊತ್ತು ಆತಂ ಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಬಂದು ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡರು.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ