ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ರೆಸಿಫಾರ್ಮಾ ಫಾರ್ಮಾಸರ್ವಿಸ್ ಕಂಪನಿ ಸೋಲದೇವನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 3 ಶಾಲೆಗಳಿಗೆ ಹಾಗೂ ಶ್ರೀನಿವಾಸಪುರ ಗ್ರಾಮ ಪಂಚಾಯಿತಿಯ 1 ಶಾಲೆಗೆ ಉಚಿತವಾಗಿ ಕಂಪ್ಯೂಟರ್ ವಿತರಣೆ ಮಾಡಿದರು .

ತಾಲ್ಲೂಕಿನ ಸೋಲದೇವನಹಳ್ಳಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೊರಿನ ಬೆಲೆ ಸರ್ಕಾರಿ ಶಾಲೆ ಹಾಗೂ ಶ್ರೀನಿವಾಸಪುರ ಬೈರಸಂದ್ರ ಶಾಲೆಗಳಿಗೆ ಒಟ್ಟು 14 ಕಂಪ್ಯೂಟರ್ ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದು.ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಸಹಕಾರ ನೀಡಲು ರೆಸಿಫಾರ್ಮಾ ಫಾರ್ಮಾಸರ್ವಿಸ್ ಕಂಪನಿ ಮುಂದಾಗಿ ಮಕ್ಕಳಿಗೆ ಉಚಿತ ಕಂಪ್ಯೂಟರ್ ನೀಡಿರುವುದಕ್ಕೆ ಸಾರ್ವಜನಿಕರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .
ಈ ವೇಳೆ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಸರ್ಕಾರಿ ಶಾಲೆಗಳ ಉನ್ನತಿಕರಣಕ್ಕೆ ರೆಸಿಫಾರ್ಮಾ ಕಂಪನಿ ಕೈಜೋಡಿಸಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕವಾಗಿದ್ದು ಖಾಸಗಿ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆಗಳ ಮಕ್ಕಳು ಎಲ್ಲಾ ರೀತಿಯಲ್ಲೂ ಮುಂದಿದ್ದು ಅವರಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಪ್ರೇರೇಪಣೆ ನೀಡುವುದು ನಮ್ಮ ಕಂಪನಿಯ ಮೂಲ ಉದ್ದೇಶವಾಗಿದೆ ಎಂದು ರೆಸಿಫಾರ್ಮಾ ಕಂಪನಿ ಐಟಿ ವಿಭಾಗದ ಉಪಾಧ್ಯಕ್ಷ ನಾಣಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ರೆಸಿಫಾರ್ಮಾ ಐಟಿ ವಿಭಾಗದ ಉಪಾಧ್ಯಕ್ಷ ನಾಣಯ್ಯ, ಪ್ರದಾನ ವ್ಯವಸ್ಥಾಪಕ ಯಶ್ವಂತ್ , ಕಾರ್ಯನಿರ್ವಾಹಕ ಹನುಮಂತರಾಜು, ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಗಂಗಾಧರ್, ಪ್ರದಾನ ಕಾರ್ಯದರ್ಶಿ ವಿಜಯ್ ಹೊಸಪಾಳ್ಯ, ಪ್ರೆಸ್ ಕ್ಲಬ್ ಸದಸ್ಯ ಗುರುಪ್ರಸಾದ್, ಸಿದ್ದರಾಜು,ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಧರ್,ಉಪಾಧ್ಯಕ್ಷೆ ಶೋಭಾ, ಸದಸ್ಯ ಚಂದ್ರಶೇಖರ್,ಡೈರಿ ಕಾರ್ಯದರ್ಶಿ ಗೋಪಾಲಯ್ಯ ಮುಖಂಡರಾದ ಗೊರಿನಬೆಲೆ ಮದು,ಬಟ್ಟರಹಳ್ಳಿ ಚೆನ್ನಕೇಶವ, ಗುರುವನಹಳ್ಳಿ ದೀಪಕ್,ವಿ.ಎಸ್.ಎಸ್.ಎನ್ ನಿರ್ದೇಶಕ ಕುಮಾರ್,ಎಸ್.ಡಿ.ಎಂ.ಸಿ ಅಧ್ಯಕ್ಷ ಚಿಕ್ಕಣ್ಣ,ಮಾಜಿ ಅಧ್ಯಕ್ಷ ಮುನಿಯಪ್ಪ,
ಗೊರಿನಬೆಲೆ ಕೇಶವ್,ರಾಮು
ಭೈರಸಂದ್ರ ಶಾಲೆಯ ಎಸ್.ಡಿಎಂಸಿ ಅಧ್ಯಕ್ಷೆ ಶಿಲ್ಪಾ, ಶಿಕ್ಷಕರಾದ ಗೌರಮ್ಮ, ಅನ್ನಪೂರ್ಣ, ರಾಧ
ಮತ್ತಿತರ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ