
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಗೀತಾಮಣಿಯವರ ಮೇಲಿನ ವಯಕ್ತಿಕ ದ್ವೇಷಕ್ಕೆ ಹಾಗೂ ಅನುಸೂಚಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರನ್ನು ಅನಾರೋಗ್ಯದ ಕಾರಣ ರಜೆ ಹಾಕಿಸಲು ಕೆಲವರಿಗೆ ಸಹಕಾರ ನೀಡದ ಹಿನ್ನಲೆ ಎಡಿಟಿಂಗ್ ಆಡಿಯೋ ಬಳಸಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತೇಜೋವದೆಗೆ ಮುಂದಾಗಿದ್ದು ಪಿಡಿಓ ಗೀತಾಮಣಿಯವರು ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೇಜೋವದೆ ಮಾಡುತ್ತಿರುವವರ ವಿರುದ್ಧ ದೂರು ದಾಖಲಿಸಿದ್ದಾರೆ.
3 ವರ್ಷಗಳ ಹಿಂದೆ ಪ್ರದೀಪ್ ಎನ್ನುವ ವ್ಯಕ್ತಿಯೊಡನೆ ಯಾವುದೊ ಖಾತೆ ವಿಚಾರವಾಗಿ ಫೋನ್ ನಲ್ಲಿ ಮಾತನಾಡಿದ್ದು ದಾಖಲಾತಿ ಇಲ್ಲದೆ ಬರೀ ಕೈಲಿ ಬಂದು ಖಾತೆ ಮಾಡಿಕೊಡುವಂತೆ ಒತ್ತಡ ಹಾಕದಂತೆ ಫೋನ್ ನಲ್ಲಿ ಮಾತನಾಡಿದ್ದು ಕಂದಾಯ ಹಣ ಕಟ್ಟುವಂತೆಯೂ ಸೂಚಿಸಿರುತ್ತಾರೆ.ಆದರೆ ಆ ಆಡಿಯೋವನ್ನು ಕೆಲವರು ದುರುದ್ದೇಶಪೂರ್ವಕವಾಗಿ 3 ವರ್ಷದ ಹಿಂದಿನ ಆಡಿಯೋವನ್ನು ಅವರಿಗೆ ಎಲ್ಲೆಲ್ಲಿಗೆ ಬೇಕೋ ಕಟ್ ಮಾಡಿ ಸೇರಿಸಿಕೊಂಡು ಅದಕ್ಕೆ ಪಿಡಿಓ ಗೀತಾಮಣಿಯವರ ಮಾರ್ಪಿಂಗ್ ಫೋಟೋ ಬಳಸಿ ಪಿಡಿಓ ಗೀತಾಮಣಿಯವರು ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿರುವ ರೀತಿಯಲ್ಲಿ ಎಡಿಟಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇತ್ತೀಚಿಗೆ ಅನುಸೂಚಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರನ್ನು ಅನಾರೋಗ್ಯದ ಕಾರಣ ರಜೆ ಹಾಕಿಸಲು ಪಿಡಿಓ ಗೀತಾಮಣಿಯವರು ಕೆಲವರಿಗೆ ಸಹಕಾರ ನೀಡಲು ಒಪ್ಪದ ಕಾರಣ ಅಲ್ಲಿನ ಕೆಲ ಪ್ರಭಾವಿಗಳು ಪಂಚಾಯತ್ ರಾಜ್ ಇಲಾಖೆಗೆ ಅನೇಕ ಸುಳ್ಳು ದೂರುಗಳನ್ನು ನೀಡಿದ್ದು ಈಗಾಗಲೇ ಜಿಲ್ಲಾ ಮಟ್ಟದ ತನಿಖಾ ತಂಡ ಪಿಡಿಓ ಗೀತಾಮಣಿ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲವೆಂದು,ಹಣಕಾಸಿನ ಅವ್ಯವಹಾರ ಆಗಿಲ್ಲವೆಂದು ಇಲಾಖೆಗೆ ತನಿಖಾ ವರದಿಯನ್ನು ನೀಡಿದೆ ಆದರೂ ಸಹ ಪಿಡಿಓ ಗೀತಾಮಣಿಯವರನ್ನು ತೇಜೋವದೆ ಮಾಡುತ್ತಿರುವುದು ಸಾರ್ವಜನಿಕವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಸರ್ಕಾರಿ ನೌಕರರು ಒತ್ತಾಯಿಸಿದ್ದಾರೆ .ಪಿಡಿಓ ಗೀತಾಮಣಿಯವರು ಕಳಲುಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ 4 ವರ್ಷದಲ್ಲಿ ರಾಜ್ಯಸರ್ಕಾರ ಉತ್ತಮ ಆಡಳಿತ,ಜನಸ್ನೇಹಿ ಆಡಳಿತ ನೀಡುವ ಗ್ರಾಮ ಪಂಚಾಯಿತಿಗಳಿಗೆ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರ 2 ಭಾರಿ ನೀಡಿರುವುದು ಗೀತಾಮಣಿಯವರ ಕರ್ತವ್ಯ ದಕ್ಷತೆಗೆ ಸಾರ್ವಜನಿಕವಲಯದಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ