November 8, 2025

ಕಳಲುಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಗಿರೀಶ್ ಎನ್ನುವವರು ಹಾಲಿ ಅಧ್ಯಕ್ಷೆ ಸೌಮ್ಯ ಅಂಜಿನಪ್ಪ ರವರನ್ನು ರಜೆ ಹಾಕಿಸಿ ಪ್ರಭಾರ ಅಧ್ಯಕ್ಷನಾಗಲು ಅನೇಕ ತಂತ್ರಗಳನ್ನು ಮಾಡಿದ್ದು ಅನಾರೋಗ್ಯದ ಕಾರಣ ಅಧ್ಯಕ್ಷೆ ಸೌಮ್ಯ ರಜೆ ಹಾಕಿ ಉಪಾಧ್ಯಕ್ಷ ಗಿರೀಶ್ ರವರಿಗೆ ಪ್ರಭಾರ ಅಧ್ಯಕ್ಷ ಸ್ಥಾನ ನೀಡಲಿಲ್ಲ ಎಂಬ ದ್ವೇಷದಿಂದ ಅಧ್ಯಕ್ಷೆಯ ಜಾತಿ ನಿಂದನೆ ಮಾಡಿ ಅವ್ಯಾಚ್ಚ ಶಬ್ದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು.ಉಪಾಧ್ಯಕ್ಷ ಗಿರೀಶ್ ಅನುಸೂಚಿತ ಸಮುದಾಯದ ಅಧ್ಯಕ್ಷೆ ಸೌಮ್ಯ ರವರನ್ನು ಇಳಿಸಲು ಮಾಡಿದ್ದ ತಂತ್ರವನ್ನು ತನ್ನ ಸ್ನೇಹಿತರೊಬ್ಬರ ಜೊತೆ ಮಾತನಾಡಿದ್ದು ಅದರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಉಪಾಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ಲೋಕೇಶ್ ರವರ ಜೊತೆ ಸೇರಿ ತಂಡ ಕಟ್ಟಿಕೊಂಡು ಅಧ್ಯಕ್ಷೆ ಸೌಮ್ಯ ರವರ ಪತಿ ಅಂಜನಾಮೂರ್ತಿ ರವನ್ನು ಹೆದರಿಸುವುದು ಸೇರಿದಂತೆ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ಅದ್ಯಕ್ಷ ಹುದ್ದೆಗೆ ರಜೆ ಹಾಕಿಸಲು ಹೆದರಿಕೆ ಹಾಕುತ್ತಿರುವ ಉಪಾಧ್ಯಕ್ಷ ಗಿರೀಶ್ ಹಾಗೂ ಮಾಜಿ ಅಧ್ಯಕ್ಷ ಲೋಕೇಶ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ದೂರು ನೀಡಿದ್ದಾರೆ. ಇನ್ನೂ ಉಪಾಧ್ಯಕ್ಷ ಗಿರೀಶ್ ಅನುಸೂಚಿತ ಸಮುದಾಯದ ಬಗ್ಗೆ ಅತೀ ಕೆಟ್ಟದಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ಆಕ್ರೋಶಗೊಂಡ ದಲಿತ ಸಂಘಟನೆಗಳು ಉಪಾಧ್ಯಕ್ಷ ಗಿರೀಶ್ ಹಾಗೂ ಮಾಜಿ ಅಧ್ಯಕ್ಷ ಗಿರೀಶ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲು ಮುಂದಾಗಿದ್ದು ಅಧ್ಯಕ್ಷೆ ಜಾತಿ ನಿಂದನೆ ಮಾಡಿ ಹೆದರಿಕೆ ಹಾಕಿರುವ ಉಪಾಧ್ಯಕ್ಷ ಗಿರೀಶ್ ಬಂಧಿಸಿ, ರೌಡಿ ಪಟ್ಟಿ ತೆಗೆಯುವಂತೆಹಾಗೂ ಸದಸ್ಯತ್ವ ವಜಾ ಗೊಳಿಸುವಂತೆ ದಲಿತಪರ ಮುಖಂಡರು ಆಗ್ರಹಿಸಿದ್ದಾರೆ.

error: Content is protected !!