November 8, 2025

ತಾಲುಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚುನಾವಣೆಗೆ ಶಿವಶಂಕರ ಕಲ್ಮಠ ನಾಮಪತ್ರ ಸಲ್ಲಿಕೆ:

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲುಕು ಸರಕಾರಿ ನೌಕರರ ಸಂಘದ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದು, ಸರಕಾರಿ ಉಪ ವಿಭಾಗ ಆಸ್ಪತ್ರೆಯ ಕ್ಷಕಿರಣ ವಿಭಾಗದ (radiology imaging officer) ಶಿವಶಂಕರ ಕಲ್ಮಠ ಇವರು ತಮ್ಮ ಹಲವಾರು ಹಿತೈಷಿ ಸಹೋದ್ಯೋಗಿಗಳೊಂದಿಗೆ ಚುನಾವಣೆ ಇಲಾಖೆಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದೇ ನವಂಬರ್ 16 ರಂದು ನಡೆಯಲಿರುವ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸರ್ಕಾರಿ ಆಸ್ಪತ್ರೆಯ ಶಿವಶಂಕರ ಕಲ್ಮಠ ಇವರು ಪತ್ರಕರ್ತರೊಂದಿಗೆ ಮಾತನಾಡಿ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಸ್ಪರ್ಧಿಸಲು ನಿರ್ದಿಷ್ಟವಾದ ಕಾರಣ ಏನೆಂದರೆ, ನಾನು ಈ ಅವಧಿಯಲ್ಲಿ ಚುನಾಯಿತದಿಂದ ಗೆದ್ದು ಬಂದರೆ, ಎನ್‌ಪಿಎಸ್ ಮತ್ತು ಓ ಪಿ ಎಸ್ ಇದರ ಜಾರಿಗಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ, ಗಂಗಾವತಿ ತಾಲೂಕಿನಲ್ಲಿ ಸರ್ಕಾರಿ ನೌಕರರ ಸಲುವಾಗಿ ಅವರ ಬಳಗಕ್ಕೆ ಮದುವೆ ಮತ್ತು ಸಂಭ್ರಮದ ಕಾರ್ಯಕ್ರಮ ಗಳಿಗೆ ಉಪಯೋಗಿಸಿಕೊಳ್ಳಲು ಒಂದು ಸುಂದರವಾದ ಕಲ್ಯಾಣ ಮಂಟಪವನ್ನು ಅವರಿಗಾಗಿ ಮೀಸಲಾಗಿ ಪ್ರತ್ಯೇಕವಾಗಿ ನಿರ್ಮಾಣ ಮಾಡುವ ಕನಸಿದೆ. ಜೊತೆಗೆ ಪ್ರತಿ ತಿಂಗಳು ಸರ್ಕಾರಿ ನೌಕರರ ಆರೋಗ್ಯದ ಹಿತ ದೃಷ್ಟಿಯಿಂದ ಆಯಾ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು. ಮತ್ತು ಸರ್ಕಾರಿ ನೌಕರರ ಭವನವನ್ನು ನವೀಕರಣಗೊಳಿಸಿ ಅದನ್ನು ಸುಂದರವಾಗಿ ಕಾಣುವಂತೆ ಮಾಡಲು ಶ್ರಮಿಸುತ್ತೇನೆ. ಮತ್ತು ಪ್ರತಿ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಆದ ಅನ್ಯಾಯಕ್ಕೆ ನಾನು ಸದಾ ಮುಂಚೂಣಿಯಲ್ಲಿ ಇದ್ದು ಸರ್ಕಾರಿ ನೌಕರರ ಹಿತವನ್ನು ಕಾಯುತ್ತೇನೆ ಎಂದು ಮತ್ತು ಈ ಸಂದರ್ಭದಲ್ಲಿ ಈದೆ ಸಂದರ್ಭದಲ್ಲಿ ಶ್ರೀನಿವಾಸ ವೆಂಕಟರಾವ್ ದ್ವಿದಸ ತಾಲೂಕು ಪಂಚಾಯತಿ ಇವರು ಕೋಶಾಧ್ಯಕ್ಷರ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು,ಇದೆ ತಂಡದಿಂದ ಶ್ರೀ ಉಮೇಶ ಎಸ್ ಪ್ರೌಢ ಶಾಲಾ ಶಿಕ್ಷಕರು ರಾಜ್ಯ ಪರಿಷತ್ತ ಸ್ಥಾನಕ್ಕೆ ನಾಳೆ ಬೆಳಗ್ಗೆ 10 ಗಂಟೆಗೆ ನಾಮ ಪತ್ರ ಸಲಿಸುತ್ತಾರೆ ಎಂದು
ಹೇಳಿದರು. ನಾಮಪತ್ರ ಸಲ್ಲಿಸಲು ತೆರಳಿದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಆಡಳಿತ ಅಧಿಕಾರಿಗಳಾದ ಡಾ. ಈಶ್ವರ ಸವಡಿ, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಗೌರಿಶಂಕರ, ಸಿಬ್ಬಂದಿಗಳಾದ ಮಂಜುನಾಥ ನವಲಿ,ಅರವಿಂದಸ್ವಾಮಿ,ಶಂಕರ್,ಪಂಪಾಪತಿ, ವೆಂಕಟೇಶ, ರಾಮಣ್ಣ, ಆಶಾಬೇಗಂ,ಖಜಾಂಚಿ ಸ್ಥಾನಕ್ಕೆ ಶ್ರೀನಿವಾಸ,ಉಮೇಶ ಎಸ್,ಅಜೇಯ ಪ್ರಸಾದ್, ಸೇರಿದಂತೆ ಇತರರು ಇದ್ದರು

error: Content is protected !!