November 8, 2025

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ರಾಯಪ್ಪಗೌಡ ಹುಡೆದ ಪುನರಾಯ್ಕೆ

 

*ಶಹಾಪುರ:* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಅತ್ಯಂತ ಬಿರುಸಿನಿಂದ ನಡೆಯಿತು. ಈ ಸಂದರ್ಭದಲ್ಲಿ ಜಯಭೇರಿ ಸಾಧಿಸಿದ ಶಹಾಪುರ ತಾಲೂಕಾ ಸರ್ಕಾರಿ ನೌಕರರ ಸಂಘದ 2 ನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಪಂಚಾಯಿತಿ ರಾಜ್ ಇಲಾಖೆಯ ತಾಲೂಕ ಪಂಚಾಯತಿ ವ್ಯವಸ್ಥಾಪಕರಾದ ರಾಯಪ್ಪಗಾಡ ಹುಡೆದರವರು ಅವಿರೋಧವಾಗಿ ಆಯ್ಕೆಗೊಂಡರು.

 

ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿ ಸಮರ್ಥವಾಗಿ ಸಂಘಟನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಾ, ಸರ್ಕಾರಿ ನೌಕರರ ಹಿತರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ ಕರ್ತವ್ಯ ನೌಕರರ ಸಂಘದ ಅಧ್ಯಕ್ಷರ ಹೊಣೆಯನ್ನು ನಿಭಾಯಿಸಿಕೊಂಡು ಬಂದ ರಾಯಪ್ಪಗೌಡ ಹುಡೆದರವರು ಮತ್ತೊಂದು ಬಾರಿಗೆ ಅಧ್ಯಕ್ಷರಾಗಿದ್ದಾರೆ, ಅವರ ಆಯ್ಕೆಗೆ ಹಲವಾರು ಜನ ಹರ್ಷ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಖಜಾಂಚಿಗಳಾಗಿ ಪ್ರೌಢ ಶಿಕ್ಷಣ ವಿಭಾಗದ ಬಸನಗೌಡ ಬೆಳ್ಳಿಕಟ್ಟಿ, ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ನಿಂಗಪ್ಪ ಪುರ್ಲೆ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

 

ವರದಿ ರಾಜಶೇಖರ ಮಾಲಿ ಪಾಟೀಲ್ ಯಾದಗಿರಿ

error: Content is protected !!