November 8, 2025

ಜನಪದ ರಾಜ್ಯೋತ್ಸವ ಪ್ರಶಸ್ತಿಗೆ ಪೂಜಾರಿ ಮಂಜುನಾಥ್ ಸಿ ಕೆಂಗಲಟ್ಟಿ ಭಾಜನ 

 

ಜನಪದ ಸಿರಿ ಸಂಸ್ಥೆಯಿಂದ ಮೂಲ ಜನಪದ ಕಲಾವಿದರಿಗೆ ನೀಡುವಂತಹ ಕರುನಾಡ ಜಾನಪದ ರಾಜ್ಯೋತ್ಸವ ಪ್ರಶಸ್ತಿಗೆ ನೆಲಮಂಗಲ ತಾಲೂಕು ಕೆಂಗಲ್ ಗೊಲ್ಲರಹಟ್ಟಿಯ ಪೂಜಾರಿ ಮಂಜುನಾಥ್ ಶ್ರೀ ಅವರು ಭಾಜನರಾಗಿರುವುದಕ್ಕೆ ತಾಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅಭಿನಂದಿಸಿದರು

ಕಾಡುಗೊಲ್ಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಇವರು ತಮ್ಮ ಸಮುದಾಯದ ಜನಪದದ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಸಮುದಾಯದ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಸಮುದಾಯದ ಗಾನಕೋಗಿಲಿ ಎಂದೇ ಪ್ರಸಿದ್ಧಿಯಾದ ಹಾಗೂ ಜಾನಪದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಮೋಹನ್ ಕುಮಾರ್ ಎನ್ ರವರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ

error: Content is protected !!