November 8, 2025

ಒಬ್ಬ ವ್ಯಕ್ತಿ ಇತಿಹಾಸದ ಪುಟಗಳಲ್ಲಿ ಉಳಿಯಬೇಕಾದರೆ ಸಾಧನೆಯಿಂದ ಮಾತ್ರಸಾಧ್ಯ!

ನೆಲಮಂಗಲ: ಒಬ್ಬ ವ್ಯಕ್ತಿ ಇತಿಹಾಸ ಪುಟದಲ್ಲಿ ಉಳಿಯಲು ಆತನ ಸಾಧನೆಯಿಂದ ಮಾತ್ರ ಸಾಧ್ಯ ಎಂದು ಶಿವಗಂಗೆ ಮೇಲಣಗವಿ ಮಠದ ಶ್ರೀ ಡಾ.ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ನಗರದ ಬಸ್ ನಿಲ್ದಾಣ ಬಳಿ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಗುರುವಾರ ಅಯೋಜಿಸಿದ್ದ ಹಿರಿಯ ಇತಿಹಾಸ ಸಂಶೋಧಕ ದಿವಂಗತ ಡಾ.ಹೆಚ್.ಎಸ್.ಗೋಪಾಲ್‌ರಾವ್ ಅವರು ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಲೋಕವನ್ನು ನಮ್ಮಗೆ ಕೊಡಬೇಕಾದರೆ ಸಾಕಷ್ಟು ಭಗವಂತ ಸಾಕಷ್ಟು ಕರಾರುಗಳನ್ನು ನೀಡಿದ್ದು ಅವರನ್ನು ಉತ್ತಮ ರೀತಿ ನಿಭಾಯಿಸಬೇಕಿದೆ.‌ ನಿತ್ಯ ಸಾಕಷ್ಟು ಮಂದಿ ಸಾಯುತ್ತಿದ್ದು ಹತ್ತಾರ ಮನಸ್ಸಿನಲ್ಲಿ ಸ್ಥಾನಗಳಿಸಿದ್ದ ವ್ಯಕ್ತಿಗೆ ಮಾತ್ರ ದೈವಾಧೀನರಾದ ಬಳಿಕವೂ ನುಡಿ ನಮನ ಅಂತಹ ಗೌರವ ಸಲ್ಲಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಇತಿಹಾಸ ಸಂಶೋಧನೆ ಮಾಡುವುದು ಕಷ್ಟಕರ ಕಾರ್ಯವಾಗಿದ್ದು ಇಂತಹ ನುಡುವೆ ಜನರಿಗೆ ಇತಿಹಾಸವನ್ಬು ಪರಿಚಯಿಸಿದ್ದ ಕೀರ್ತಿ ಡಾ.ಹೆಚ್.ಎಸ್. ಗೋಪಾಲ್‌ರಾವ್ ಅವರಿಗೆ ಸಲ್ಲುತ್ತದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಸಾಹಿತ್ಯ, ಸಂಶೋಧನೆಯ ಬಗ್ಗೆ ಅಪಾರ ಗೌವರವಿಟ್ಟುಕೊಂಡು ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದ್ದಾರೆ. ನೆಲಮಂಗಲ ನೆಲದಲ್ಲಿ ಐತಿಹಾಸ ಹಿನ್ನಲೆ ಇದೆ ಎಂಬುದನ್ನು ನಾಡಿನ‌ ಜನರಿಗೆ ತೊರಿಸಿ ಇತಿಹಾಸ ಪುಟದಲ್ಲಿ ದಾಖಲೆಗಳು ಉಳಿಯುವಂತೆ ಮಾಡಿದ್ದು ಪ್ರತಿಯೊಬ್ಬರು ಅವರನ್ನು ಸ್ಮರಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಹಿರಿಯ ಸಂಶೋಧಕ ಡಾ.ಹೆಚ್.ಎಸ್.ಗೋಪಾಲ್‌ರಾವ್ ಅವರ ಚಿಂತನೆ ಸಮಗ್ರ ಸಾಹಿತ್ಯ ಪುಸ್ತಕ ಪ್ರಕಟಣೆ ಯಾಗಬೇಕಿದೆ. ಅವರ ಕನಸ್ಸು ನನಸ್ಸು ಮಾಡುವ ಕಾರ್ಯ ಮಾಡಬೇಕು. ಅವರ ಕದಾಂಬರಿ, ಸಂಶೋಧನೆ ಬಗ್ಗೆ ವಿಚಾರ ಗೋಷ್ಟಿ ಯನ್ನು ನಡೆಸುವ ಕಾರ್ಯ ನಿರಂತವಾಗಿ ಸಾಗಬೇಕಿದೆ ಎಂದರು.

ನಗರಸಭೆ ಅದ್ಯಕ್ಷೆ ಪೂರ್ಣಿಮಸುಗ್ಗರಾಜು ಮಾತನಾಡಿ ತಾಲೂಕಿನ ಇತಿಹಾಸವನ್ನು ರಾಜ್ಯಕ್ಕೆ ಪರಿಚಯಿದ್ದ ಮಹಾನ್ ಚೇತನ ಇಂದು ಕಣ್ಮರೆಯಾಗಿರುವುದು ಬಹಳ ನೋವಿನ ಸಂಗತಿ. ಡಾ.ಹೆಚ್.ಎಸ್.ಗೋಪಾಲ್‌ರಾವ್ ಅವರ ದೈಹಿಕವಾಗಿ‌ ನಮ್ಮೊಂದಿಗೆ ದೂರವಾದರೂ ಮಾನಸಿಕ ವಾಗಿ ಸದಾ ಇರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಅಗಲಿಕೆ ಸಾಮಾನ್ಯವಾಗಿದ್ದು ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ ಧೈರ್ಯವನ್ನು ಕರುಣಿಸಲಿ ಎಂದರು.

ಕೃತಿ ಸೃಜನಶೀಲ ಕೃತಿ ಲೋಕಾರ್ಪಣೆ: ನುಡಿ ಗಮನ ಕಾರ್ಯಕ್ರಮ ಹಿನ್ನಲೆ ಸಮಾನ ಮನಸ್ಕರ ವೇದಿಕೆಯಿಂದ ಸಾಹಿತಿ ಎನ್.ಜಿ.ಗೋಪಾಲ್ ಅವರ ಸಂಪಾದನೆಯ ಸೃಜನಶೀಲ ಶಿರ್ಷಿಕೆಯ ಕೃತಿಯನ್ನು ನಿವೃತ್ತ ಕನ್ನಡ ಪ್ರಾದ್ಯಾಪಕ ಡಾ.ಗೀತಾಚಾರ್ಯ ಲೋಕಾಪರ್ಣೆ ಮಾಡಿದರು. ಖ್ಯಾತ ಗಾಯಕ ಚಿಕ್ಕಮಾರನಹಳ್ಳಿಸಿದ್ದಯ್ಯ ಗೀತಗಾಯನ ನೆರವೇರಿಸಿಕೊಟ್ಟರು.

ಸಂದರ್ಭದಲ್ಲಿ ಸುಧಾ ಮತ್ತು ವಯೂರ ಪತ್ರಿಕೆ ಕಾರ್ಯನಿರ್ವಾಹಲ ಸಂಪಾದಕ ರಘುನಾಥ.ಚ.ಹ, ನಿವೃತ್ತ ಕನ್ನಡ ಪ್ರಾದ್ಯಾಪಕ ಡಾ.ಗೀತಾಚಾರ್ಯ, ಸಮಾನ ಮನಸ್ಕರ ವೇದಿಕೆ ಮುಖ್ಯಸ್ಥ ಎನ್.ಜಿ.ಗೋಪಾಲ್, ದಿವಂಗತ ಡಾ.ಹೆಚ್.ಎಸ್.ಗೋಪಾಲ್‌ರಾವ್ ಧರ್ಮಪತ್ನಿ ಸೀತಾಲಕ್ಷ್ಮೀ, ಪುತ್ರರಾದ ಬಾಲಸುಬ್ರಹ್ಮಣ್ಯ, ಕಾರ್ತಿಕೇಯಾ, ವಿಶಾಕ, ಸೊಸೆ ಡಾ.ವೇದಾವತಿ, ಜೆ.ಅಮೂಲ್ಯ, ಆರ್ಚಾಯ ಗುರುಪರಂಪರ ವಿದ್ಯಾ ಸಂಸ್ಥೆ ಸಂಸ್ಥಾಪಕ ರಂಗಾಚಾರ್, ವೀರಶೈವ ಮಹಾಸಭಾ ತಾಲೂಕು ಆದ್ಯಕ್ಷ ಎನ್.ರಾಜಶೇಖರ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಆದ್ಯಕ್ಷ ಲಕ್ಷ್ಮೀನಾರಾಯಣ್‌ಶೆಟ್ಟಿ, ಎಂ.ವಿ.ನೆಗಳೂರು, ಪ್ರದೀಪ್‌ಕುಮಾರ್, ಕನ್ನಡ ಸಾಂಸ್ಕೃತಿಕ ರಂಗ ಅದ್ಯಕ್ಷ ಡಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕಾರ್ಯದರ್ಶಿ ಗಿರೀಶ್, ಸಾಹಿತಿ ಡಾ.ಚೌಡಯ್ಯ, ವೆಂಕಟೇಶ್‌ಚೌಥಾಯಿ, ಪ್ರಜಾಕವಿ‌ನಾಗರಾಜು, ಬೂದಿಹಾಲ್‌ಕಿಟ್ಟಿ, ಆನಂದ್‌ವೈ.ಮೌರ್ಯ, ಮಾರುತಿ ಶಿವಪ್ರಸಾದ್‌ಆರಾದ್ಯ, ನರಸಿಂಹಯ್ಯ ಉಪಸ್ಥಿತರಿದ್ದರು.

error: Content is protected !!