ಕೃಷಿ,ಧಾರ್ಮಿಕ,ಜಿಲ್ಲಾ ಹೋರಾಟ ಸಮಿತಿ ಹಾಗೂ ಸಾಹಿತಿ, ಕುಂದಾಪುರ ಜಿಲ್ಲಾ ಹೋರಾಟಗಾರ ಹಾಗೂ ಹತ್ತು ಹಲವು ಸಂಘಟನಾತ್ಮಕ ಶಕ್ತಿಯನ್ನು ಬೆಳೆಸಿಕೊಂಡ ಕೃಷಿಕ ಧಾರ್ಮಿಕ ಚಿಂತಕ ಕುಂದಾಪುರ ತಾಲೂಕಿನ ಕವ್ರಾಡಿ ಮುಂಬಾರು ಮನೆಯ ದಿನಕರ್ ಶೆಟ್ಟಿಯವರಿಗೆ ಇತ್ತೀಚಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕರ್ನಾಟಕ ಸರ್ಕಾರ ಕೊಡ ಮಾಡಲಾದ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ, ನಡೆಯುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲೆಯಿಂದ 43 ಜನ ಸಾಧಕರನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿದೆ,ಮುಂಬಾರು ದಿನಕರ ಶೆಟ್ಟಿ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ, 17ನೇಯವರು, ಕುಂದಾಪುರ ತಾಲೂಕಿನ, ಕವ್ರಾಡಿ ಗ್ರಾಮದ, ಮುಂಬಾರು ಮನೆ ಬಂಟ ಸಮುದಾಯದ ಕುಟುಂಬದಲ್ಲಿ, ಶ್ರೀಮತಿ ಪ್ರಪುಲ್ಲ ಜಗನ್ನಾಥ ಶೆಟ್ಟಿ, ದಂಪತಿಗಳ ಮಗನಾಗಿ, 5/7/1973 ರಂದು ಜನಿಸಿದ ಇವರು, ಶಿಕ್ಷಣದ ನಂತರ, ನಿರಂತರ 15 ವರ್ಷ ರಾಜಕಾರಣದಲ್ಲಿ ಸೇವೆ ಮಾಡಿ, ಅದಾದ ನಂತರ, ಕೃಷಿ ಕ್ಷೇತ್ರದಲ್ಲಿ, ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು, ತೊಡಗಿಸಿಕೊಂಡಿರುತ್ತಾರೆ. ಇತ್ತೀಚಿಗೆ ಶ್ರೀ ಸೌಕೂರು ದುರ್ಗಾಪರಮೇಶ್ವರಿ ದೇಗುಲ ದ ಭಕ್ತಿಸಾರದ ಗೀತೆಯನ್ನ ಸೃಷ್ಟಿಸುವುದರ ಮೂಲಕ ನಿನ್ನಷ್ಟು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚಿನ ದಿನದಲ್ಲಿ ಕುಂದಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಬಹಳ ಪ್ರಾಮುಖ್ಯತೆ ಪಡೆದಿರುವ ವಿಷಯ, ಬಾಲ್ಯದಿಂದಲೂ ಸಮಾಜದ ಕಳಕಳಿ ಇರುವ ಇವರು, ತಮ್ಮ ಪರಿಸರದಲ್ಲಿ ಹಲವು ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ, ಹಲವು ವರ್ಷದಿಂದ ರಾಜಕೀಯ ವ್ಯವಸ್ಥೆಯಿಂದ ದೂರ ಉಳಿದು, ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಪ್ರಯತ್ನ ಮೂಡಿಸಿದರು , ಪರಿಸರ ಅಲ್ಲವೇ ರಾಜ್ಯ,ದೇಶ ಮಟ್ಟದಲ್ಲೂ ರಾಷ್ಟ್ರೀಯ ಮಟ್ಟದಲ್ಲೂ ಕೃಷಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಾಲೂಕು ಜಿಲ್ಲಾ ಮಟ್ಟದಲ್ಲೂ ಕೃಷಿ ಪಾಠಶಾಲೆಯನ್ನು ತೊಡಗಿಸಿಕೊಂಡಿದ್ದಾರೆ,
ಇದನ್ನೆಲ್ಲ, ಪರಿಗಣಿಸಿ,ಕರ್ನಾಟಕ ಸರ್ಕಾರ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಸಾಲಿನಲ್ಲಿ, ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನವನ್ನು
ದಿನಾಂಕ,1/11/2024ಉಡುಪಿ, ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಜಿಲ್ಲಾಧಿಕಾರಿ ಮತ್ತು, ಉಸ್ತುವಾರಿ ಸಚಿವರ, ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಿಲ್ಲಾ ವಿವಿಧ ಉನ್ನತ ಮಟ್ಟದ ಅಧಿಕಾರಿಗಳು ಸಮ್ಮುಖ ದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರ ಸಾಮಾಜಿಕ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದುಕೊಂಡಿರುವುದು ಸಂತಸ ತಂದಿದೆ. ಇನ್ನಷ್ಟು ಪ್ರಶಸ್ತಿಗಳು ಇವರ ಮುಡಿಗೆ ಒಲಿದು ಬರಲಿ ಎನ್ನುವುದೇ ಪತ್ರಿಕೆಯ ಆಶಯ.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ