” ಕರಾವಳಿಯಿಂದ ತಿರುಪತಿ ದರ್ಶನಕ್ಕೆ ನೇರ ರೈಲಿನ ವ್ಯವಸ್ಥೆ…!” ವಾರದ ಎರಡು ದಿನದಲ್ಲಿ ಸಂಚಾರ….!” ಬಹುದಿನದ ಕನಸಿಗೆ ರೈಲ್ವೆ ಇಲಾಖೆ ಅಸ್ತು….!” ಮಂಗಳೂರಿನ ವರೆಗೆ ಸಂಚರಿಸುತ್ತಿದ್ದ ರೈಲು, ಮುರುಡೇಶ್ವರದವರೆಗೆ ವಿಸ್ತರಣೆ….!” ಇನ್ನು ಮುಂದೆ ತಿರುಪತಿ ತಿಮ್ಮಪ್ಪನ ದರ್ಶನ ಇನ್ನಷ್ಟು ಸರಳ….!” ಸ್ಲೀಪಿಂಗ್ ಕೋಚ್ ಗೆ ರೂ. 510, ಹವಾ ನಿಯಂತ್ರಿತ ಭೋಗಿಗೆ 1,100 ದರ ನಿಗದಿ…!”
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ( ಪತ್ರಕರ್ತರು, ಮಾಧ್ಯಮ ವಿಶ್ಲೇಷಕರು )

ಕರಾವಳಿಗರ ಬಹುದಿನದ ಕನಸಿನ ಆಸೆ ಒಂದು ಈಡೇರಿದೆ. ಕರಾವಳಿಯಿಂದ ನೇರವಾಗಿ ತಿರುಪತಿಗೆ ಹೋಗುವ ನೈರುತ್ಯ ರೈಲ್ವೆ ಪ್ರಾರಂಭಗೊಂಡಿದೆ. ಕರಾವಳಿಗರ ಬಹುದಿನದ ಕನಸು ಅದಲ್ಲದೆ ಪ್ರವಾಸಿಗರಿಗೆ ಮತ್ತು ಯಾತ್ರಾ ಸ್ಥಳಗಳಿಗೆ ಸಂಚರಿಸುವ ರೈಲ್ವೆ, ಕರಾವಳಿಗಿರನ್ನ ಮೂಲ ಕೇಂದ್ರವಾಗಿಟ್ಟುಕೊಂಡು ವಿಶೇಷವಾಗಿ ಸಂಚರಿಸುವ ರೈಲು ಕರಾವಳಿಗರ ಕನಸನ್ನ ಈಡೇರಿಸಿದೆ. ಕರಾವಳಿಯ ಬಹುತೇಕ ಮಂದಿ ತಿರುಪತಿ ತೆರಳಬೇಕಾದರೆ ಬೆಂಗಳೂರು ಮಾರ್ಗವಾಗಿ ಸಂಚರಿಸುವುದು ವಾಡಿಕೆಯಾಗಿತ್ತು. ಬೆಂಗಳೂರಿನವರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸಿ ನಂತರ ರೈಲ್ವೆ ಯನ್ನ ಅವಲಂಬಿಸಬೇಕಾಗುತ್ತದೆ. ಆದರೆ ಇದೀಗ ಕರಳಿಗರಿಗೆ ಬಹುದೊಡ್ಡದ ಕನಸೊಂದು ಈಡೇರಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೇ ಸಚಿವಾಲಯವು ಮಂಗಳೂರುವರೆಗೆ ಬರುತ್ತಿದ್ದ ರೈಲು (12789/12790) ಅನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲು ಒಪ್ಪಿಗೆ ನೀಡಿ ಆದೇಶಿಸಿದೆ. ಈ ರೈಲು ಸೇವೆಯೊಂದಿಗೆ ಹೈದರಾಬಾದ್ ನಗರಿಯೊಂದಿಗೂ ಸಂಪರ್ಕ ಸಾಧ್ಯವಾಗಲಿದೆ.
ರೈಲ್ವೆ ಸಂಚರಿಸುವ ಪ್ರತಿಯೊಂದು ನಿಲ್ದಾಣಗಳಿಗೂ ಪ್ರತ್ಯೇಕವಾದಂತಹ ವಿತರಣಾ ಮಾಹಿತಿಯನ್ನ ನೀಡಲಾಗುತ್ತದೆ. ರೈಲು ಸಂಚರಿಸುವ ಮಾರ್ಗವು ಧ್ವನಿಯೊಂದಿಗೆ ಘೋಷಣೆಯಾಗುವ ಮೂಲಕ ಇನ್ನಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲ್ವೆಯಲ್ಲಿ ಎಂದಿನಂತೆ ಮಲಗುವ ವ್ಯವಸ್ಥೆ ಹಾಗೂ ಜನರಲ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.ರೈಲ್ವೆ ಇಲಾಖೆಯ ನಿರ್ಧಾರ ಬಹಳಷ್ಟು ಯಶಸ್ವಿಯಾಗಿಸುಗುವಲ್ಲಿ ರೈಲು ಪರ ಹೋರಾಟಗಾರರ ಸಂಘ ಅಭಿನಂದಿಸಿದೆ.
ರೈಲು ಸಂಚರಿಸುವ ಮಾರ್ಗ:-
ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತ್ತಿದ್ದ ಕಾಚಿಗುಡ – ಮಂಗಳೂರು ನಡುವೆ ವಾರಕ್ಕೆರಡು ದಿನ ಸಂಚರಿಸುತ್ತಿದ್ದ ರೈಲನ್ನು ಉಡುಪಿ, ಕುಂದಾಪುರದ ಮೂಲಕ ಮುರ್ಡೇಶ್ವರದವರೆಗೆ ವಿಸ್ತರಣೆ ಮಾಡಬೇಕೆಂಬ ಸಂಸದರ ಮನವಿಗೆ ಭಾರತೀಯ ರೈಲ್ವೇ ಸ್ಪಂದಿಸಿದೆ.
ರೈಲು ವೇಳಾಪಟ್ಟಿ:-
ಈ ರೈಲು ಬುಧವಾರ ಮತ್ತು ಶನಿವಾರ ಮುರ್ಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದ್ದು, ಕುಂದಾಪುರಕ್ಕೆ ಸಂಜೆ 4.40, ಮಂಗಳೂರು ರಾತ್ರಿ 8, ತಿರುಪತಿ ಬಳಿಯ ರೇಣಿಗುಂಟಕ್ಕೆ ಮರುದಿನ ಬೆಳಗ್ಗೆ 11.45 ಹಾಗೂ ಹೈದರಾಬಾದಿನ ಕಾಚಿಗುಡ ನಿಲ್ದಾಣಕ್ಕೆ ಸಂಜೆ 6ಕ್ಕೆ ತಲುಪಲಿದೆ. ಬಳಿಕ ಮರಳಿ ಕಾಚಿಗುಡದಿಂದ ಬೆಳಗ್ಗೆ 6ಕ್ಕೆ ಹೊರಡಲಿದ್ದು, ರೇಣಿಗುಂಟಕ್ಕೆ ಸಂಜೆ 5, ಮಂಗಳೂರಿಗೆ ಮರುದಿನ ಬೆಳಗ್ಗೆ 9.30, ಕುಂದಾಪುರಕ್ಕೆ 11.59 ಹಾಗೂ ಮುರ್ಡೇಶ್ವರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ.
ಮುರ್ಡೇಶ್ವರದ ಮೂಲಕ ಬೈಂದೂರು,ಕುಂದಾ ಪುರ, ಉಡುಪಿ, ನಗರಗಳು ಕೊಯಮತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್‌ವರೆಗೆ ರೈಲು ಸಂಪರ್ಕ ಪಡೆಯಲಿದೆ.
ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ :-
ವಿಜಯದಶಮಿಯಂದು ಚಾಲನೆ ಕಾಚಿಗುಡ ರೇಣಿ ಗುಂಟ ತಿರುಪತಿ ಮಂಗಳೂರು ರೈಲನ್ನು ಶನಿವಾರ 4.30 ಕ್ಕೆ ಬಾರ್ಕೂರು ರೈಲು ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.
ವಿಜಯದಶಮಿಯಂದು ಕರಾವಳಿಯಿಂದ ತಿರುಪತಿಗೆ ರೈಲು ಆರಂಭವಾಗಲಿದ್ದು ಈ ಮೂಲಕ ಕರಾವಳಿಗರ ದೀರ್ಘಕಾಲದ ಬೇಡಿಕೆ ಈಡೇರಿದಂತಾಗಿದೆ ವಿಸ್ತರಣೆ ಗೊಂಡ ಕಾಚಿಗುಡ ರೇಣಿ ಗುಂಟ ತಿರುಪತಿ ಮಂಗಳೂರು ರೈಲಿನ ಮೊದಲ ಓಡಾಟ ಶನಿವಾರ ಆರಂಭ ಗೊಳ್ಳಲಿದೆ
ಈ ರೈಲಿನ ಮೊದಲ ಓಡಾಟವನ್ನು ಸ್ವಾಗತಿಸಲು ಕರಾವಳಿಯ ವಿವಿಧ ರೈಲು ನಿಲ್ದಾಣಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು,ಅದರಂತೆ ಬಾರ್ಕೂರಿನಲ್ಲಿ ಸಂಜೆ 4.30ಕ್ಕೆ ವಿವಿಧ ಸಂಘ ಸಂಸ್ಥೆಗಳ ನೇತೃತವದಲ್ಲಿ ಈ ರೈಲನ್ನು ಸ್ವಾಗತಿಸಲು ಸಕಲ ಸಿದ್ದತೆ ಮಾಡಿಕೊಂಡು ಹಸಿರು ನೀಶಾನೆ ತೋರಿಸಲಾಯಿತು .ಈ ರೈಲಿನ ಮೊದಲ ಓಡಾಟವನ್ನು ಸ್ವಾಗತಿಸಲು ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ವಿಶೇಷವಾಗಿ ಸ್ವಾಗತಿಸಿ ಕಳುಹಿಸಿಕೊಡಲಾಯಿತು.
ತೀರ್ಥಯಾತ್ರಿಕರಿಗೆ ಅನುಕೂಲ :
ಕರಾವಳಿಗರ ಈ ರೀತಿಯಾದಂತಹ ಕನಸು ಬಹಳಷ್ಟು ಅನುಕೂಲತೆಯನ್ನ ಮಾಡಿಕೊಟ್ಟಿದೆ. ತಿರುಪತಿ ದೇಗುಲ ದರ್ಶನ ಸೇರಿದಂತೆ ವಿವಿಧ ಯಾತ್ರಾ ಸ್ಥಳಗಳಿಗೆ ಈ ರೈಲು ಉಪಯೋಗವಾಗುತ್ತದೆ. ಉಡುಪಿ ಮೂಲಕ ಸಂಚರಿಸುವ ಈ ರೈಲು ಕರಾವಳಿ ಗರಿಗೆ ಮತ್ತಷ್ಟು ವ್ಯವಸ್ಥೆಯನ್ನು ಕಲ್ಪಿಸುವಂತಾಗಿದೆ. ತೀರ್ಥಯಾತ್ರೆಗೆ ಹಾಗೂ ದೇಗುಲ ದರ್ಶನಗಳಿಗೆ ತೆರಳುವ ಭಕ್ತಾಭಿಮಾನಿಗಳಿಗೆ ಈ ರೈಲು ಇನ್ನಷ್ಟು ಪುಷ್ಟಿ ನೀಡುತ್ತದೆ. ರೈಲ್ವೆ ಇಲಾಖೆಯು ಕಟ್ಟಿ ನಿಟ್ಟಿನ ಕ್ರಮ ಭದ್ರತೆ ಹಾಗೂ ಆಹಾರದ ಸುರಕ್ಷತಾ ದೃಷ್ಟಿಯಿಂದ ವಿಶೇಷವಾದ ಕ್ಯಾಟರಿಂಗ್ ವ್ಯವಸ್ಥೆಯನ್ನು ಕೂಡ ರೈಲ್ವೆಯಲ್ಲಿ ಕಲ್ಪಿಸಲಾಗಿದೆ. ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಂಡು ರೈಲ್ವೆ ಇಲಾಖೆಯ ಜೊತೆಗೆ ಕೈಜೋಡಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಕುಂದಾಪುರದಿಂದ ತಿರುಪತಿಗೆ ವಿಶೇಷವಾದ ಸ್ಲೀಪಿಂಗ್ ಕೋಚ್ ನ್ನ ಅಳವಡಿಸಲಾಗಿದೆ. ತಿರುಪತಿಗೆ ಸ್ಲೀಪಿಂಗ್ ಕೋಚ್ ದರ : 510 ರೂಪಾಯಿ, ಹವಾ ನಿಯಂತ್ರಿತ ವಾಗಿ ಮುಂಗಡವಾಗಿ ಕಾದಿರಿಸಲು 1,100 ರೂಪಾಯಿಗಳನ್ನು ಸಲ್ಲಿಸಬೇಕಾಗುತ್ತದೆ. ಅದಲ್ಲದೆ ವಿಶೇಷವಾಗಿ ಕಾದರಿಸುವ ಭೋಗಿಗಳನ್ನ ಮುಂಚಿತವಾಗಿ ನಾವು ದಿನಾಂಕವನ್ನು ನಿಗದಿ ಮಾಡಿ, ರಿಸರ್ವೇಶನ್ ಮಾದರಿಯಲ್ಲಿ ಮುಂಗಡ ಬುಕ್ಕಿಂಗನ್ನ ಕಾಯಿಲೆಸಬಹುದಾಗಿದೆ.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ