November 8, 2025

ಆತ್ಮರಾಮ ಪ್ರೌಢಶಾಲೆಯಲ್ಲಿ ಸಭಾಂಗಣ ನಿರ್ಮಿಸಿ ಸಾರ್ಥಕತೆ ಮೆರೆದ ವಿದ್ಯಾರ್ಥಿಗಳು

 

1996-97 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಪಾಠ ಕಲಿಸಿದ ಗುರುಗಳಿಗೆ ಶಿಷ್ಯ ವೃಂದದಿಂದ ಗೌರವ ಸಮರ್ಪಣೆ

ಇಂದಿನ ದಿನಮಾನಗಳಲ್ಲಿ ಅವರವರ ಕೆಲಸಗಳ ಒತ್ತಡದಿಂದ ಮನೋರಂಜನೆಗೆ ಸಮಯ ಕೊಟ್ಟು ಖುಷಿಪಡುವ ದಿನಗಳೇ ಕಡಿಮೆ ಆಗಿರುತ್ತದೆ

ಇಂತಹ ಸನ್ನಿವೇಶದಲ್ಲಿ ದಾಪಸ್ ಪೇಟೆ ಸಮೀಪದ ನರಸೀಪುರ ಆತ್ಮರಾಮ ಪ್ರೌಢಶಾಲೆಯ 1996 97 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮವು ಅಲ್ಲಿ ನೆರೆದಿದ್ದ ನೂರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಕಾರ್ಯಕ್ರಮಕ್ಕೆ ಸಾಕ್ಷಿ ಆಯಿತು.

ಮೊದಲಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗುರುೃಂದದವರನ್ನು ಮೆರವಣಿಗೆಯ ಮುಖಾಂತರ ಸಭಾಂಗಣಕ್ಕೆ ಕರೆತರಲಾಯಿತು ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಧಾ ಬರಗೂರು ಅವರಿಂದ ಹೊಸದಾಗಿ ನಿರ್ಮಿಸಿದ್ದ ಶ್ರೀ ಹನುಮಂತರಾವ್ ಸಭಾಂಗಣವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗುರುರಂದರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಸತ್ಕರಿಸಿದರು,

ಸುಧಾ ಬರಗೂರು ಅವರು ಹಾಸ್ಯ ಚಟಾಕಿಗಳನ್ನು ಹಾರಿಸುವುದರ ಮೂಲಕ ನೆರೆದಿದ್ದ ಸಭಿಕರಿಗೆ ಮನೋರಂಜನೆಯನ್ನು ನೀಡಿದರು ನಂತರ ಅವರು ಮಾತನಾಡಿ ನಮಗೆ ಇಂದು ಸಮಾಜದಲ್ಲಿ ಒಳ್ಳೆಯ ಗೌರವ ಮನ್ನಣೆ ಹಾಗೂ ಉತ್ತಮ ಸ್ಥಾನಮಾನಗಳು ಸಿಗುತ್ತಿವೆ ಎಂದಾದಲ್ಲಿ ಅವುಗಳ ಮೂಲ ರೂವಾರಿ ನಮ್ಮ ಶಿಕ್ಷಕರೇ ಆಗಿರುತ್ತಾರೆ ಆದ್ದರಿಂದ ನಾವುಗಳು ನಮಗೆ ಪಾಠ ಕಲಿಸಿದ ಗುರುಗಳಿಗೆ ಸದಾ ರುಣಿ ಆಗಿರಬೇಕು ಎಂದರು.

error: Content is protected !!