November 8, 2025

*ನ. 16 ರಂದು ಐಸಿಸಿ ನೀರಾವರಿ ಸಲಹಾ ಸಮಿತಿ ಸಭೆ*

 

*ಶಹಾಪುರ:* ಹಿಂಗಾರು ಹಂಗಾಮು 2024/25 ನೇ ಸಾಲಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯನ್ನು ನ.16 ರಂದು ಬೆಳಿಗ್ಗೆ 11 ಗಂಟೆಗೆ ಆಲಮಟ್ಟಿಯಲ್ಲಿ, ಕೃಷ್ಣಾ ಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಭಾಂಗಣದಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷರಾದ ಆ‌ರ್.ಬಿ. ತಿಮ್ಮಾಪುರ ಅವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಮಂಗಾರು ಹಂಗಾಮಿನ ಬೆಳೆಗೆ ಕಾಲುವೆ ನೀರು ಹರಿಸುವುದು ನಾಳೆ ನ.13 ಮುಕ್ತಾಯಗೊಳ್ಳಲಿದೆ. ಅದರಂತೆ ಹಿಂಗಾರು ಹಂಗಾಮಿನ ಬೆಳೆಗೆ ಎಷ್ಟು ದಿನಗಳ ಕಾಲ ನೀರು ಹರಿಸುವ ಪ್ರಮುಖ ನಿರ್ಧಾರವನ್ನು ಸಭೆಯಲ್ಲಿ ಚರ್ಚಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ರೈತರು ಆದಷ್ಟು ನೀರು ಸರಿಯಾಗಿ ಮತ್ತು ಮಿತಿಯಾಗಿ ಬಳಸಿ ನಿಗದಿಪಡಿಸಿದ ಅವಧಿಯೊಳಗೆ ಬೆಳೆ ಬೆಳೆದುಕೊಳ್ಳಬೇಕು. ಆಮೇಲೆ ಹೋರಾಟ, ಪ್ರತಿಭಟನೆ ಹಾದಿ ತುಳಿಯುವುದು ಬೇಡ ಎಂದು ತಿಳಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಯಾದಗಿರಿ

error: Content is protected !!